ನೀಟ್ ಪಿ.ಜಿ ಪರೀಕ್ಷೆ : ನಾಲ್ಕ ತಿಂಗಳು ಮುಂದೂಡಿಕೆ

ನವದೆಹಲಿ, ಮೇ.3- ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲು ಉದ್ದೇಶಿದ್ದ ನೀಟ್ – ಪಿಜಿ ಪರೀಕ್ಷೆಯನ್ನು ನಾಲ್ಕು ತಿಂಗಳ ಕಾಲ ಮುಂದೂಡಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ‌ ಪ್ರಧಾನ‌ ಮಂತ್ರಿಗಳ ಸಚಿವಾಲಯದ ಈ ನಿರ್ಧಾರ ಕೈಗೊಂಡಿದೆ.

ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಸೋಂಕಿನ ‌ವಿರುದ್ದ ಚಿಕಿತ್ಸೆ ನೀಡಲು ಬಳಸಿಕೊಳ್ಳುವ ಹಿ್ಙನ್ನೆಲೆಯಲ್ಲಿ ನೀಟ್- ಪಿಜಿ ಪರೀಕ್ಷೆಯನ್ನು 4 ತಿಂಗಳು ಮುಂದೂಡಲಾಗಿದೆ ಎಂದು ತಿಳಿಸಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳ ಬಳಕೆ:

ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆ ನೀಡಲು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನ ಮಂತ್ರಿಗಳ ಕಛೇರಿ‌ ಮಾಹಿತಿ ನೀಡಿದೆ.

ಏಪ್ರಿಲ್ 15 ರಿಂದ ನೀಟ್ ಪಿಜಿ ಪರೀಕ್ಷೆ ನಡೆಸಲು‌ ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದರು‌

ದೇಶದಲ್ಲಿ ‌ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಿಜಿ- ಸಿಇಟಿ ಪರೀಕ್ಷೆ ಯನ್ನು 4 ತಿಂಗಳು ಕಾಲ ಮುಂದೂಡಿದೆ.