ಕೋಲಾರ,ಜೂ.೧೫- ಕೋಲಾರದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ೨೦೨೩ರ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ವೆಂಕಟರಾಮ್ ಕೆ. ಎಂ. ಎಂಬ ವಿದ್ಯಾರ್ಥಿಯು ೭೨೦ ಅಂಕಗಳಿಗೆ ೬೨೭ ಅಂಕ, ಗ್ಲೋರಿಯಾ ಇ.ಬಿ. ೬೧೨, ಅಕ್ಷಯ ಎಂ. ೫೭೯ ಅಂಕ, ದರ್ಶನ್ ಎಸ್. ೫೭೦ ಅಂಕ ಪಡೆದಿದ್ದಾರೆ.
ಹಲವು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.