ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಿರಿಗೇರಿಯ ಗ್ರಾಮೀಣ ಪ್ರತಿಭೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.16. 2023 ನೇ ಸಾಲಿಗೆ ನಡೆದ ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಯುವ ಪ್ರತಿಷ್ಠಿತ ನೀಟ್ ಪರೀಕ್ಷೆಯಲ್ಲಿ ಸಿರಿಗೇರಿ ಗ್ರಾಮದ ಜೆ.ದೀಪಾ ಎಂಬ ಗ್ರಾಮೀಣ ಪ್ರತಿಭೆ ಸಾಧನೆ ತೋರಿದ್ದಾಳೆ. ನೀಟ್ ಪರೀಕ್ಷೆಯಲ್ಲಿ 720 ಕ್ಕೆ 611 ಅಂಕ ಪಡೆದು ಎಂಬಿಬಿಎಸ್ ಕೋರ್ಸ್‍ಗೆ ಅರ್ಹತೆ ಪಡೆದಿದ್ದಾಳೆ. ಸಿರಿಗೇರಿಯವರೇ ಆದ ಶಿವಶಂಕರ ಮತ್ತು ಶಾರದಾ ಎಂಬ ದಂಪತಿಗಳು ದುಡಿಮೆಗಾಗಿ ಕುರುಗೋಡು ಪಟ್ಟಣದಲ್ಲಿ ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡು ತಮ್ಮ 3ಜನ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರವುದು ವಿಶೇಷವಾಗಿದೆ. ಜೆ.ದೀಪಾ ತನ್ನ ಪ್ರೌಢಶಿಕ್ಷಣವನ್ನು 6ನೇ ತರಗತಿಯಿಂದ ಮೊರಾರ್ಜಿ ವಸತಿ ಶಾಲೆ ಪಂಪಾಪೀಠ ವಿದ್ಯಾಲಯ ರಾಮಸಾಗರದಲ್ಲಿ ಮುಗಿಸಿ, ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡ 91% ಅಂಕ ಗಳಿಸಿದ್ದಾಳೆ. ಬಳ್ಳಾರಿಯ ಬೆಷ್ಟ್ ಕಾಲೇಜಿನಲ್ಲಿ ಪಿಯುಸಿ ಸೈನ್ಸ್‍ನಲ್ಲಿ ಶೇಕಡ 96% ಅಂಕ ಪಡೆದು ಈಗ ನೀಟ್ ಪರೀಕ್ಷೆಯಲ್ಲಿ 611 ಅಂಕ ಗಳಿಸಿಕೊಂಡಿದ್ದಾಳೆ. ಜೆ.ದೀಪಾ ಪ್ರತಿಭೆಗೆ ಸಿರಿಗೇರಿಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.