ನೀಟ್ ಪರೀಕ್ಷೆಯಲ್ಲಿ ಚೇತನಾ ಕಾಲೇಜಿನ ವಿದ್ಯಾರ್ಥಿ ಸುಧೀರ್ ಸೈನಿ ಅಮೋಘ ಸಾಧನೆ

ವಿಜಯಪುರ, ಸೆ.14-2022ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ನಗರದ ಚೇತನಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಸುಧೀರ್ ಸೈನಿ 720 ಅಂಕಗಳಿಗೆ 622 ಅಂಕಗಳನ್ನು ಪಡೆದುಕೊಂಡು ಜಿಲ್ಲೆಯಲ್ಲಿಯೇ ಉತ್ತಮ ರ್ಯಾಂಕ್ ಗಳಿಸಿ ಅಮೋಘ ಸಾಧನೆಯನ್ನು ಮಾಡಿದ್ದಾನೆ. ಉತ್ತಮ ರ್ಯಾಂಕ್ ಗಳಿಸಿದ್ದಕ್ಕಾಗಿ ಸುಧೀರ್ ಸೈನಿಯವರನ್ನು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ದಯಾನಂದ ಜುಗತಿಯವರು ಸನ್ಮಾನಿಸಿದರು, ನಿರ್ದೇಶಕರಾದ ಡಾ. ನಾಗರಾಜ ಹೇರಲಗಿ, ಸಹಾಯಕ ಆಡಳಿತ ಅಧಿಕಾರಿ ಪ್ರಮೋದ ಕುಲಕರ್ಣಿ, ಪ್ರಾಚಾರ್ಯ ವಿಶ್ವನಾಥ ದಾಬಡೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.