ನಿಸ್ವಾರ್ಥ ಸೇವೆಯೇ ಸಮಾಜಕ್ಕೆ ಕೊಡುಗೆ

ಧಾರವಾಡ,ಜು19 : ಎಲ್ಲವನ್ನೂ ಕೊಟ್ಟಿರುವ ದೇಶ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನೇ ಕೊಡುಗೆಯಾಗಿ ನೀಡಬೇಕೆಂದು ಧಾರವಾಡ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ. ಎಸ್. ಬೆಳ್ಳುಂಕೆ ಹೇಳಿದರು.
ಇಲ್ಲಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುರೇಶ್ ವಂಟಿಗೋಡಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪ್ರಾಮಾಣಿಕ ಸೇವೆ ಸಲ್ಲಿಸಲು ಕುಟುಂಬ, ಬಂಧುಗಳು ಸೇರಿದಂತೆ ಎಲ್ಲರ ಸಹಕಾರ ಮತ್ತು ವಾತಾವರಣ ಅತ್ಯಂತ ಅಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಸುರೇಶ್ ವಂಟಿಗೋಡಿ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಚಿವ ಬಿ. ಆರ್. ಯಾವಗಲ್ ಮಾತನಾಡಿ, ಒಳ್ಳೆಯ ಕಾರ್ಯಗಳ ಮೂಲಕ ಜನಸೇವೆ ಮಾಡಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುರೇಶ್ ವಂಟಿಗೋಡಿ ಅವರು ಶೃದ್ಧೆ ಮತ್ತು ಪ್ರಾಮಾಣಿಕತೆಯ ದಾರಿಗಳು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತವೆ. ಆ ಮಾರ್ಗದಲ್ಲಿ ಸಲ್ಲಿಸಿದ ಸೆವೆಗಳು ಆತ್ಮ ತೃಪ್ತಿ ತರುತ್ತವೆ ಎಂದು ಹೇಳಿದರು.
ಅತಿಥಿಗಳಾಗಿದ್ದ ಸವದತ್ತಿ ತಾಲೂಕಿನ ಮಾಜಿ ಶಾಸಕ ಆರ್ ವಿ ಪಾಟೀಲ, ನಿವೃತ್ತ ನ್ಯಾಯಾಧೀಶ ಬಿ. ಕೆ. ನಾಯ್ಕ, ಹಿರಿಯ ನ್ಯಾಯವಾದಿ ವಿ. ಡಿ. ಕಾಮರೆಡ್ಡಿ, ನ್ಯಾಯವಾದಿ ಬಿ. ಎಮ್. ಯಲಿಗಾರ, ಸ್ವಪ್ನಾ ವಂಟಿಗೋಡಿ, ಪಾಂಡು ವಾಸನದ, ಎಚ್. ಕೆ. ವಂಟಿಗೋಡಿ, ನ್ಯಾಯವಾದಿ ದಡೇದ, ದಿವ್ಯಾ ಜಾಲಿಕೊಪ್ಪ , ಬಸವರೆಡ್ಡಿ ಲಿಂಗದಾಳ ಮುಂತಾದವರು ಮಾತನಾಡಿದರು.
ನಿ. ನ್ಯಾಯಾಧೀಶ ಸುರೇಶ್ ವಂಟಿಗೋಡಿ ಹಾಗೂ ಅವರ ಶ್ರೀಮತಿ ಸುನಂದಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪೆÇ್ರ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ನ್ಯಾಯವಾದಿ ಎಸ್. ಆರ್. ಪಾಟೀಲ್ ವಂದಿಸಿದರು. ಪ್ರಾರಂಭದಲ್ಲಿ ಡಾ. ಜ್ಯೋತಿ ಲಕ್ಷ್ಮಿ ಡಿ ಪಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಸಲ್ಲಿಸಿದರು.