ನಿಸ್ವಾರ್ಥ ಸೇವೆಗೆ ಎಲ್ಲೇಡೆ ಗೌರವ:ಪಟ್ಟದ್ದೇವರು

ಭಾಲ್ಕಿ:ಮಾ.15:ಶ್ರದ್ಧೆ,ಭಕ್ತಿ,ನಿಷ್ಟೆ ಮತ್ತು ನಿಸ್ವಾರ್ಥತತೆಯಿಂದ ಸೇವೆ ಸಲ್ಲಿಸುವವರಿಗೆ ವಿಶ್ವದ ಎಲ್ಲ ಮೂಲೆಗಳಲ್ಲಿ ಸ್ಥಾನ-ಮಾನ ದೊರೆಯುತ್ತವೆ ಎಂದು ಹಿರೇಮಠದ ಹಿರಿಯ ಪೂಜ್ಯರಾದ ಡಾ.ಬಸವಲಿಂಗ ಪಟ್ಟದ್ದೇವರು ಪ್ರತಿಪಾದಿಸಿದರು.
ಇಲ್ಲಿನ ಹಿರೇಮಠದಲ್ಲಿ,ಹಿರೇಮಠ ವಿದ್ಯಾಪೀಠಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ ಪ್ರಯುಕ್ತ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‍ನವರು ಡಾ.ಬಸವಲಿಂಗ ಪಟ್ಟದ್ದೇವರನ್ನ ಮತ್ತು ಗುರುಬಸವ ಪಟ್ಟದೇವರನ್ನ ಅಭಿನಂದಿಸುವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ನಿಸ್ವಾರ್ಥ ಸೇವೆಗೆ ಯಾರಿಂದಲೂ ಬೆಲೆ ಕಟ್ಟಲಿಕ್ಕಾಗುವುದಿಲ್ಲ.ಸಮಾಜದ ಏಳಿಗೆಗಾಗಿ ಸೇವೆ ಮಾಡುವವರಲ್ಲಿ ಸಂಕುಚಿತ ಮನೋಭಾವನೆಯಿರಬಾರದು ಎಂದು ಹೇಳಿ,ಭಾಲ್ಕಿ ರೋಟರಿ ಕ್ಲಬ್‍ನವರು ಸಹ ಶೈಕ್ಷಣಿಕ,ಸಾಮಾಜಿಕ ಸೇವೆಯ ಜೊತೆಯಲ್ಲಿ ಪೊಲಿಯೋ ನಿವಾರಣೆ ಮಾಡುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ತಾಲೂಕು ಅಧ್ಯಕ್ಷ ಡಾ.ಯುವರಾಜ ಜಾಧವ,ಕೋಶಾಧ್ಯಕ್ಷ ಡಾ.ವಸಂತ ಪವಾರ,ಮಾಜಿ ಎಜಿ ಡಾ.ಅಮೀತ ಅಷ್ಟೂರೆ,ಮಕ್ಕಳ ತಜ್ಷ ಡಾ.ನಿತೀನ ಪಾಟೀಲ,ಡಾ.ಅನೀಲ ಸುಕಾಳೆ,ಪ್ರಾಚಾರ್ಯ ಅಶೋಕ ರಾಜೋಳೆ,ಉದ್ಯಮಿ ಶಾಂತವೀರ ಸಿರ್ಗಾಪುರೆ,ಪ್ರೊ.ಶಿವಾನಂದ ಯಾಳಗಿ ಸೇರಿದಂತೆ ಇತರರಿದ್ದರು.