ನಿಸ್ವಾರ್ಥ ಸೇವಾ ಮನೋಭಾವ ಅತ್ಯಂತ ಮುಖ್ಯ

ಸಂಜೆವಾಣಿ ವಾರ್ತೆ

ಶಿವಮೊಗ್ಗ.ಜ.೨೬; ಪ್ರತಿಯೊಬ್ಬ ವ್ಯಕ್ತಿಯೂ ನಿಸ್ವಾರ್ಥ ಸೇವಾ ಮನೋಭಾವ ಗುಣ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಅಗತ್ಯ ಇರುವವರಿಗೆ, ಅಂಗವಿಕಲರಿಗೆ ಸೇರಿದಂತೆ ಅರ್ಹರಿಗೆ ನೀಡುವ ಸೇವೆಯು ಸದಾ ನಮ್ಮನ್ನು ಕಾಪಾಡುತ್ತದೆ ಎಂದು ಇನ್ನರ್‌ವ್ಹೀಲ್ ಜಿಲ್ಲಾ ಮಾಜಿ ಚೇರ‍್ಮನ್ ವಾರಿಜಾ ಜಗದೀಶ್ ಹೇಳಿದರು.ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ಒದಗಿಸುವ ಶ್ರೇಷ್ಠ ಕಾರ್ಯಗಳನ್ನು ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ನಡೆಸಬೇಕು. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಲಹೆ ನೀಡಿದರು.ಜ್ಯೋತಿ ಬೆನಕಪ್ಪ, ಜ್ಯೋತಿ ಪ್ರಭು, ರಾಜೇಶ್ವರಿ ಪ್ರತಾಪ್, ಶ್ವೇತಾ ಆಶಿತ್ ಅವರು ನೀಡಿದ ದೇಣಿಗೆಯಿಂದ ಕಾಶಿಪುರ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಕೃತಿಕಾ ಅವರಿಗೆ ಟ್ರೈಸೈಕಲ್ ವಿತರಿಸಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ನೆರವು ನೀಡಲಾಯಿತು.ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ಶತಮಾನೋತ್ಸವ ಪ್ರಯುಕ್ತ ತಿಂಗಳ ಪೂರ್ತಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಸಂಸ್ಥೆ ವತಿಯಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳಿಂದಲೇ ಗುರುತಿಸಲ್ಪಟ್ಟ ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಸದಸ್ಯರಿಗೆ ಅಭಿನಂದಿಸಲಾಯಿತು. ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು.ವೀಣಾ ಸುರೇಶ್, ಶಬರಿ ಕಡಿದಾಳ್, ವಿಜಯಾ ರಾಯ್ಕರ್, ಬಿಂದು ವಿಜಯಕುಮಾರ್, ಚೇತನಾ, ರಾಜೇಶ್ವರಿ, ವಾಗ್ದೇವಿ ಬಸವರಾಜ್, ಜ್ಯೋತಿ ಪ್ರಭು, ಇನ್ನರ್‌ವ್ಹೀಲ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.