ನಿಸ್ವಾರ್ಥ ಭಾವನೆಯಿಂದ ಸೇವೆ ನೀಡುವವನೇ ನಿಜವಾದ ಗುರು

ಕೆಂಭಾವಿ:ಜು.19:ಯಾವದೆ ಸ್ಥಾನ ಬಯಸದೆ ನಿಸ್ವಾರ್ಥ ಭಾವನೆಯಿಂದ ಸೇವೆ ನೀಡುವವನೆ ನಿಜವಾದ ಗುರು ಎಂದು ಕೊಡೆಕಲ್ ದುರದುಂಡೇಶ್ವರ ಮಠದ ಪೂಜ್ಯ ಶಿವಕುಮಾರ ಸ್ವಾಮಿಗಳು ಹೇಳಿದರು.

ಪಟ್ಟಣದ ಸಮೀಪ ಕರಡಕಲ್ ಗ್ರಾಮದ ಸದ್ಗುರು ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ನೆರವೇರಿದ ಗುರುವಂದನೆ, ತುಲಾಬಾರ, 249 ನೆ ಮಾಸಿಕ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಅನೇಕ ಮಠಗಳು ತ್ರಿದಾಸೋಹ ನೀಡುತ್ತಾ ಗುರು ಪರಂಪರೆಯನ್ನು ಮುಂದುವರೆಸುತ್ತಿವೆ. ಗುರುವಿನ ಆದೇಶವನ್ನು ಭಕ್ತರು ಪಾಲಿಸಿದರೆ ಸಮಾಜ ಸುಧಾರಣೆ ತನ್ನಿಂತಾನೆ ಆಗುತ್ತದೆ ಎಂದು ಹೇಳಿದರು.

ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಆನಂದಗೌಡ ದೊಡ್ಡಮನಿ, ಗುರು ಕಾಮಾ, ಭೀಮರೆಡ್ಡಿಗೌಡ ಕುರಾಳ, ರಾಮುನಾಯಕ ಅರಳಹಳ್ಳಿ, ಕಾಂತು ಪಾಟೀಲ ಮದ್ದರಕಿ, ಶರಣಗೌಡ ಐಕೂರ, ವಿಶ್ವನಾಥರೆಡ್ಡಿ, ಪಂಚಾಕ್ಷರಿ ಹಿರೇಮಠ, ರುದ್ರಸ್ವಾಮಿ ಸೇರಿದಂತೆ ಇತರರಿದ್ದರು.

ಇದೇ ಸಂದರ್ಭದಲ್ಲಿ ಮಠದ ಶ್ರೀಗಳಿಗೆ ಗುರುದೀಕ್ಷೆ ಭಕ್ತರಿಂದ ನಾಣ್ಯಗಳಿಂದ ತುಲಾಭಾರ ನೆರವೇರಿತು. ಮಠದ ವಕ್ತಾರ ಶಿವಪ್ರಕಾಶಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನಸ್ವಾಮಿ ನಿರೂಪಿಸಿದರು. ಹಣಮಂತ್ರಾಯ ಬೊಮ್ಮಗುಡ್ಡ ವಂದಿಸಿದರು.