ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರಡ್ಡಿ ಮಲ್ಲಮ್ಮ-ಶರಣೆ ಅಕ್ಕಮಹಾದೇವಿ

ತಾಳಿಕೋಟೆ:ಮೇ.11: ದಾಸೋಹ ಮತ್ತು ದಾನದ ಪರಿಕಲ್ಪನೆಯನ್ನು ಬಿತ್ತುವದರೊಂದಿಗೆ ನಿಸ್ವಾರ್ಥ ಭಕ್ತಿಗೆ ಹೆಸರಾದವರು ಸ್ವಾಧಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮನವರು ಆಗಿದ್ದಾರೆ ಎಲ್ಲರಿಗೂ ಮೋಕ್ಷದ ದಾರಿಯನ್ನು ತೋರಿಸಿದ್ದು ಅವಳ ಚರಿತ್ರೆಯನ್ನು ಓದಿ ತಿಳಿದುಕೊಳ್ಳುವದರೊಂದಿಗೆ ಮುಂದೆ ಸಾಗಬೇಕೆಂದು ಇಂಗಳಗೇರಿಯ ಶ್ರೀ ಖಾಸ್ಗತೇಶ್ವರ ಮಠದ ಶರಣೆ ಮಾತೋಶ್ರೀ ಅಕ್ಕಮಹಾದೇವಿ ಶರಣಮ್ಮನವರು ಹೇಳಿದರು.
ಶುಕ್ರವಾರರಂದು ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಆಯೋಜಿಸಲಾದ ಸ್ವಾಧಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಹಾಗೂ ಹೇಮರಡ್ಡಿ ಮಲ್ಲಮ್ಮನವರ ವೃತ್ತವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಮಾಜದ ಸುದಾರಣೆಯಲ್ಲಿ ಕ್ರಾಂತಿಯನ್ನು ಮಾಡಿದಂತಹ ಹೇಮರಡ್ಡಿ ಮಲ್ಲಮ್ಮನವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಅವರ ವಿಚಾರ ಮತ್ತು ತತ್ವಗಳನ್ನು ಪ್ರತೊಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಫಿಳಿಗೆಗೆ ಆದರ್ಶವಾಗುವ ರೀತಿಯಲ್ಲಿ ಸಾಗಬೇಕು ಮಹಿಳೆಯರಿಗೂ ಆದರ್ಶಪ್ರೀಯವಾದ ಜೀವನವನ್ನು ನಡೆಸಲು ಮುನ್ನೆಲೆಗೆ ಬಂದವರಲ್ಲಿ ಹೇಮರಡ್ಡಿ ಮಲ್ಲಮ್ಮನವರು ಆಗಿದ್ದಾರೆ ಸಂಸಾರದಲ್ಲಿ ಎಲ್ಲ ನೋವು ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ ಮಾದರಿಯಾಗಿ ಬಿನ್ನವಾಗಿ ಬಧುಕನ್ನು ಸಾಗಿಸಿ ಆದ್ಯಾತ್ಮೀಕ ಶಕ್ತಿಯನ್ನು ಶ್ರೀಶೈಲ ಮಲ್ಲಿಕಾರ್ಜುನನಿಂದ ಪಡೆದುಕೊಂಡು ಮನಕುಲಕ್ಕೆ ಆದ್ಯಾತ್ಮದ ದಾರಿಯನ್ನು ತೋರಿಸಿದ್ದಾರೆ ಅವರ ಆದರ್ಶಮಯವಾದ ಜೀವನವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕೆಂದ ಅವರು ಇಂಗಳಗೇರಿ ಗ್ರಾಮದ ಎಲ್ಲ ಜನರೂ ಒಗ್ಗೂಡಿ ಮಲ್ಲಮ್ಮನವರ ಹೆಸರಿನಲ್ಲಿ ವೃತ್ತವನ್ನು ನಿರ್ಮಿಸಿ ಮುಂದಿನ ಫಿಳಿಗೆಗೆ ಪರಿಭಾಷೆಯನ್ನು ಬರೆಯುವದರೊಂದಿಗೆ ಪರಿಚಯಿಸುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಲ್ಲಮ್ಮನವರ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ನಂತರ ಗ್ರಾಮದ ಸುಮಂಗಲೆಯರಿಗೆ ಶ್ರೀಮತಿ ಸುವರ್ಣಾ ಬಿರಾದಾರ ಅವರ ನೇತೃತ್ವದಲ್ಲಿ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಾಯಂಕಾಲ ಮಲ್ಲಮ್ಮ ವೃತ್ತದಲ್ಲಿ ದ್ವಜಾರೋಹಣದ ನಂತರ ಶ್ರೀ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರುಗಳಾದ ರಮೇಶ ಸಾಸನೂರ, ರಮೇಶ ಮುದ್ದೇಬಿಹಾಳ, ಮಲ್ಲಣ್ಣ ಕೊಳೂರ, ರಾಮನಗೌಡ ಕರಡ್ಡಿ, ಬಸನಗೌಡ ಉಣ್ಣಿಭಾವಿ, ಬಾಬು ಉಣ್ಣಿಭಾವಿ, ಸಿದ್ದು ಮುದ್ದೇಬಿಹಾಳ, ಅಕ್ಷಯ ಮುದ್ದೇಬಿಹಾಳ ಶ್ರೀಮತಿ ಸುವರ್ಣಾ ಬಿರಾದಾರ, ಶ್ರೀಮತಿ ಸಾವಿತ್ರಿ ಸಾಸನೂರ, ಗಿರಿಜಾ ಮುದ್ದೇಬಿಹಾಳ, ಸಂಗಮ್ಮ ಮುದ್ದೇಬಿಹಾಳ, ಲಕ್ಷ್ಮೀಬಾಯಿ ಕರಡ್ಡಿ, ಮೊದಲಾದವರು ಉಪಸ್ಥಿತರಿದ್ದರು.