ನಿಸ್ವಾರ್ಥವಾದ ಪ್ರಾಮಾಣಿಕ ಸೇವೆ ಯಶಸ್ಸಿನ ಗುಟ್ಟು ; ನ್ಯಾ.ಹೊಸಮನಿ

ವಿಜಯಪೂರ:ಮೇ.17: ಜಿಲ್ಲೆಯಲ್ಲಿ ಕಾನೂನು ಅರಿವು, ನೇರವು ನೀಡುವಲ್ಲಿ ಮತ್ತು ಕಾನೂನು ಸೇವೆ ಪ್ರಾಧೀಕಾರದ ಉದ್ದೇಶವನ್ನು ಜನರ ಮನೆ- ಮನ ಬಾಗಿಲಿಗೆ ತಲುಪುವಂತೆ ಮಾಡಿದ ವಿಜಯಪೂರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಆದ ಗೌರವಾನ್ವಿತವೆಂಕಣ್ಣ.ಬಿ.ಹೊಸಮನಿ ಅವರು ವರ್ಗಾವಣೆಯಾದ ನಿಮಿತ್ಯ ಅವರಿಗೆ ಇಲ್ಲಿನ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರ, ಪೆನಲ್ ವಕೀಲರು, ಮಧ್ಯಸ್ಥಗಾರರು, ಡಿಫೆನ್ಸ್ ಕೌನ್ಸಿಲರರು ಇವರ ಸಂಯುಕ್ತಾಶ್ರಯದಲ್ಲಿ ವಿಶಿಷ್ಟವಾಗಿ ಜರುಗಿತು.
ಸನ್ಮಾನ ಸ್ವೀಕರಿಸಿದ ನ್ಯಾಯಾಧೀಶರಾದ ಶ್ರೀ. ವೆಂಕಣ್ಣ.ಬಿ.ಹೊಸಮನಿ ಅವರು ಮಾತನಾಡಿ ಜೀವನದಲ್ಲಿ ನಿಸ್ವಾರ್ಥವಾದ ಪ್ರಾಮಾಣಿಕ ಸೇವೆಯು ಬದುಕಿನ ಯಶಸ್ಸಿನಿ ಗುಟ್ಟಾಗಿದೆ, ನೇರ ಮತ್ತು ನಿಸ್ಪಕ್ಷಪಾತವಾಗಿ ನಮ್ಮ ಸೇವೆ ನಾವು ಮಾಡಿದರೆ ಸಮಾಜದ ಬೆಳವಣಿಗೆಗೆ ಪೂರಕವಾಗುತ್ತದೆ ಸಮಾಜದ ವಿವಿಧ ಸ್ಥರಗಳ್ಳಿ ನೋಂದ ಬೆಂದ ಜನರಿಗೆ ಕಾನೂನಿನ ಅರಿವು ನೇರವು ನೀಡಿದರೆ ನೋಂದ ಜನರು ಸಂಕಸ್ಟದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದರು.
ಇಂದಿನ ದಿನಮಾನಗಳಲ್ಲಿ ಕಾನೂನು ಪ್ರತಿಯೋಬ್ಬರು ಅರಿಯಬೇಕಾದದ್ದು ಅಗತ್ಯವಾಗಿದೆ. ಕಾನೂನಿನ ಅಂಶಗಳನ್ನು ಸದಾ ನಾವೆಲ್ಲಾ ಪಾಲಿಸಿ ಇತರರಿಗು ಪಾಲಿಸಲು ಪ್ರೇರೆಪಿಸಿ ಕಾನೂನು ಜಾಗ್ರತಿಗೆ ಇನ್ನೂ ಹೆಚ್ಚು ಶ್ರಮಿಸಬೇಕೆಂದರು. ವಿಜಯಪುರ ಜಿಲ್ಲೆಯಲ್ಲಿ ನಾನು ಸೇವೆ ಸಲ್ಲಿಸಿದ್ದು ನನಗೆ ಸಂತೋಷವಾಗಿದೆ ಜನಸಾಮಾನ್ಯರಿಗೆ ಕಾನೂನಿನ ಅರಿವು ನೆರವು ವದಗಿಸಲು ಹಿರಿಯರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡಿದ್ದೇನೆ. ನನ್ನ ಕೈಲಾದಷ್ಟು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ ಎಂದು ಅವರು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಮಲ್ಲಿಕಾರ್ಜುನ.ಗ.ಭೃಂಗಿಮಠ ಅವರು ಮಾತನಾಡಿ ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರು ಜಿಲ್ಲೆಯಲ್ಲಿ ನೋಂದು ಬೆಂದವರಿಗೆ, ಕಾನೂನಿನ ಅರಿವಿಲ್ಲದೆ ಮೋಸ ಹೋದ ಅದೆಸ್ಟೋ ಜನರಿಗೆ ನ್ಯಾಯ ಕೊಡಿಸಿದ ಉದಾಃರಣೆಗಳುಂಟು, ಅವರ ಸೇವೆ ಆದರ್ಶಮಯವಾಗಿದೆ, ಪ್ರತಿ ಹಂತದಲ್ಲಿಯು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ, ಯಾರೆಯಾಗಲಿ ಕಾನೂನಿನ ಪರಧಿಯೋಳಗೆ ಕೆಲಸ ಮಾಡಬೇಕು ಸದಾ ಕ್ರಿಯಾತ್ಮಕವಾಗಿ ಜನರ ನೋವಿಗೆ, ಕಸ್ಟಗಳೀಗೆ ಸ್ಪಂದಿಸಲೆಬೇಕು ಎಂದು ಹೇಳುತ್ತಲೆ ಅತ್ಯುತ್ತಮ ಕಾಯಕ ಮಾಡಿಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ, ಇಂತಹ ಮಾದರಿಯ ಕರ್ತವ್ಯ ನೀರ್ವಹಿಸಿದ ನ್ಯಾಯಾಧೀಶರಾದ ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರು ವರ್ಗವಾಗಿ ಹೋಗುತ್ತಿರುವರು ನಮಗೆ ನೋವು ತಂದಿದೆ, ಸರ್ಕಾರದ ನಿಯಮದ ಪ್ರಕಾರ ವರ್ಗಾವಣೆ ಅನಿವಾರ್ಯವಾಗಿದೆ ಅವರು ಎಲ್ಲಿ ಹೋದರು ವಿಜಯಪುರ ಜಿಲ್ಲೆಗೆ ಹೊಸಮನಿ ಅವರು ಮಾಡಿರುವ ಕಾನೂನು ಸೇವೆ ಶಾಶ್ವತವಾಗಿದೆ ಎಂದರು.
ಹಿರಿಯ ನ್ಯಾಯವಾದಿ ಶ್ರೀ. ಸುಭಾಶ. ಛಾಯಗೋಳ ಅವರು ಮಾತನಾಡಿ ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರ ಪ್ರಮಾಣಿ ಮತ್ತು ಉತ್ಸಾಹಭರಿತ ಕ್ರಿಯಾಶೀಲ ಸೇವೆ ಅತ್ಯುತ್ತಮವಾಗಿದೆ. ಜಿಲ್ಲೆಯಲ್ಲಿ ಕಾನೂನು ಪ್ರಾಧೀಕಾರದ ಸೇವೆ ಮತ್ತು ಅರಿವು ನೇರವು ಪರಿಣಾಮಕಾರಿಯಾಗಿ ಜನರಿಗೆ ನಿಡುವಲ್ಲಿ ಇವರ ಸೇವೆ ಸಾರ್ಥಕವಾಗಿದೆ. ಇಂತಹ ಸದಸ್ಯ ಕಾರ್ಯದರ್ಶಿಗಳು ನಮ್ಮ ಜಿಲ್ಲೆಗೆ ಬಂದು ಕೇಲಸ ಮಾಡಿರುವದು ನಮಗೆ ಹೆಮ್ಮೆ ಎನಿಸಿದೆ, ಕಾನೂನ ಸೇವಾ ಪ್ರಾಧಿಕಾರ ಜಿಲ್ಲೆಯಲ್ಲಿ ಇದೆ ಎಂಬುದು ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ಗೊತ್ತಾಗಿದ್ದು ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರ ಸೇವಾ ವೈಖರಿಯಿಂದ ಎಂದು ಬಣ್ಣಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂಧಿ ವರ್ಗದ ಪರವಾಗಿ ಆಡಳಿತ ಸಾಹಾಕರಾದ ಅನೀಲ. ದಶವಂತ ಅವರು ಮಾತನಾಡಿ ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರು ಸಿಬ್ಬಂದಿಯೊಂದಿಗೆ ಉತ್ತಮವಾಗಿ ನಡೆದುಕೊಂಡರು, ಕಾನೂನು ಸೇವಾ ಪ್ರಾಧಿಕಾರದ ಕಾರ್ಯವಧಾನವನ್ನು ಚಾಚು ತಪ್ಪದೆ ಪಾಲಿಸಲು ಪ್ರೇರೆಪಿಸಿದರು ಅವರ ಅಧಿಕಾರ ವ್ಯಾಪ್ತಿಯಲ್ಲಿ ನಾವು ಸಹ ಸೇವೆ ಮಾಡಲು ಉತ್ತಮ ಪ್ರೇರಣೆ ನಮಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು ವಕೀಲರ ಸಂಘದ ಗೌರವ ಕಾರ್ಯದರ್ಶಿ ಶ್ರೀ. ಅಶೋಕ. ಜೈನಾಪೂರ, ಶ್ರೀ. ಬಸವರಾಜ ಕೆ ಮಠ, ಶ್ರೀ. ಯು.ಎಮ್. ಆಲಗುರ ಶ್ರೀ. ತುಕಾರಾಮ. ಸೂರ್ಯವಂಶಿ, ಕೆ.ಎಸ್.ಆರ್.ಟಿ.ಸಿ ವಿಭಾಗ ನಿಯಂತ್ರಣಾಧೀಕಾರಿ ಶ್ರೀ ಎಮ್ .ಎ ಮುಲ್ಲಾ ಮತ್ತು ಮಲ್ಲು. ಬಿದರಿ ಮುಂತಾದವರು ಮಾತನಾಡಿದರು.
ಸನ್ಮಾನ್ಯ ಶ್ರೀ. ರಾಮಾನಾಯಕ ಪ್ರಭಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುÁಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಪುರ ಅವರು ಮುಖ್ಯ ಅತಿಥಿಗಳಾಗಿಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು, ವಕೀಲರ ಸಂಘದ ಅಧ್ಯಕ್ಷರಾದ ಶ್ರೀ. ಈರಣ್ಣ . ಚಾಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕುಮಾರಿ ಭುವನೇಶ್ವರಿ.ರಾ.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಹಿರಿಯ ನ್ಯಾಯವಾದಿ ಶ್ರೀ. ಆರ್.ಎಸ್. ನಂದಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಗನಬಸವ ಪ್ರಾಥಮಿಕ ಶಾಲೆ ಕಿರ್ತಿ ನಗರದ ವಿದ್ಯಾರ್ಥಿನಿಯಾದ ಕುಮಾರಿ. ಏಕದಂತಾ. ಸೂರ್ಯವಂಶಿ ಪ್ರಾರ್ಥನಾ ಗೀತೆಯನ್ನು ಹಾಡಿದರು, ಹಿರಿಯ ನ್ಯಾಯವಾದಿ ಶ್ರೀ. ಆರ್. ಈ. ಸಂಜುವಾಡಮಠ ಭಕ್ತಿ ಗೀತೆ ಹಾಡಿದರು, ಕುಮಾರಿ. ಅಂಬಿಕಾ.ಎಮ್. ಯಂಕಂಚಿ ವಂದಿಸಿದರು.ಮುಖ್ಯ ಡಿಫೆನ್ಸ ಕೌನ್ಸಿಲ್ ಶ್ರೀ. ರಾಜೀವ ಬಿದರಿ, ಡೆಪ್ಯುಟಿ ಡಿಫೆನ್ಸ ಕೌನ್ಸಿಲ್ ಧನಪಾಲ, ಶ್ವೇತಾ. ಪಾಟೀಲ್ ನ್ಯಾಯವಾದಿಗಳಾದ ಶ್ರೀ. ಆಯ್.ಜಿ.ತಾಳೀಕೋಟೆ, ಡಿ.ಜಿ.ಬೀರಾದಾರ ಎಸ್.ಎಸ್. ಮೂಡಲಗಿ, ಶ್ರೀ ಪಟ್ಟಣಶೆಟ್ಟಿ, ಖುಧಾನಪೂರ, ಬಿಸ್ತಗೋಂಡ, ರಾಜೇಶ್ವರಿ. ಪಾಟೀಲ್, ರಾಜೇಶ. ಎಳಸಂಗಿಮಠ, ವಿಜಯಲಕ್ಷ್ಮೀ ಪಾಟೀಲ್, ಅನೀತಾ. ಚುರಿ, ಬಾಬು. ಅವತಾಡೆ, ಪವಾರ, ಪ್ರಕಾಶ.ಪಾಟೀಲ್, ವಿ.ಜಿ.ಕುಲಕರ್ಣಿ ಮುಂತಾದವರು ಪಾಲೋಂಡಿದರು.ಕಾರ್ಯಕ್ರಮದಲ್ಲಿ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ಕವಿಗಳು ಕವನವಾಚಿಸಿದರು, ಒಟ್ಟಾರೆ ಕಾರ್ಯಕ್ರಮವು ಕಾನೂನು ಅಂಶಗಳನ್ನು ಕಾವ್ಯ, ರಾಗ, ಭಾವಗಳ ಮೂಲಕ ವ್ಯಕ್ತವಾದದ್ದು ವಿಶೇಷವಾಗಿತ್ತು.
ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರ ಕಾರ್ಯವೈಖರಿಯ ಕುರಿತು ಕವಿಗಳು ರಚಿಸಿರುವ ಕವಿತೆಯ ಫಲಕವನ್ನು ನೆನಪಿನ ಕಾಣಿಕೆಯಾಗಿ ವಿಜಯಪೂರ ಜಿಲ್ಲೆಯ ಪರವಾಗಿ ಅರ್ಪೀಸಲಾಯಿತು,ಗೌರವಾನ್ವಿತ ವೆಂಕಣ್ಣ.ಬಿ.ಹೊಸಮನಿ ಅವರ ಸೇವೆಗೆ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಅವರಿಗೆ ಕರ್ತವ್ಯಯೋಗಿ ಎಂದು ಶ್ಲಾಘಿಸಿದ್ದು ಅವರ ಸೇವೆಯ ಮಹತ್ವ ಎತ್ತಿ ತೋರಿಸಿತು.


ದಿ ಕೇರಳ ಸ್ಟೋರಿ ಚಲನಚಿತ್ರ ಉಚಿತ ವೀಕ್ಷಣೆಗೆ ಚಾಲನೆ
ನಿರೀಕ್ಷೆ ಮೀರಿ ಚಿತ್ರ ವೀಕ್ಷಿಸಿದ ಜನ

ವಿಜಯಪುರ:ಮೇ.17: ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು, ದೇಶದಾದ್ಯಂತ ಸಂಚಲನ ಮೂಡಿಸಿರುವ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಹಿಂದೂಗಳು ಒಟ್ಟಾಗಿ ಕುಳಿತುಕೊಂಡು ವೀಕ್ಷಣೆ ಮಾಡಲು ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತ ವ್ಯವಸ್ಥೆ ಕಲ್ಪಿಸಿದ್ದು, ಮಂಗಳವಾರ ಪ್ರಥಮ ಶೋ ಪ್ರದರ್ಶನಕ್ಕೆ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು ಚಾಲನೆ ನೀಡಿ, ವೀಕ್ಷಣೆ ಮಾಡಿದರು.
ಅತ್ಯಂತ ಉತ್ಸಾಹದಿಂದ ಆಗಮಿಸಿದ ಜನರು ಚಿತ್ರ ಮುಗಿಯುವವರೆಗೂ ಎಲ್ಲೂ ಕದಲದೇ ಅತ್ಯಂತ ಶ್ರದ್ಧೆಯಿಂದ ವೀಕ್ಷಣೆ ಮಾಡಿದರು. ಚಿತ್ರಮಂದಿರದಲ್ಲಿ ಇರುವ ಕುರ್ಚಿಗಳು ತುಂಬಿದ ಮೇಲೆ ಬಂದ ಜನರು ಮರಳಿ ಹೋಗದೆ, ನೆಲದ ಮೇಲೆ ಕುಳಿತು ವೀಕ್ಷಿಸಿರುವುದು ವಿಶೇಷವಾಗಿತ್ತು.
ಯುವ ಸಮೂಹಕ್ಕೆ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆ ಅಗತ್ಯವಿದೆ. ಇದನ್ನು ನೋಡುವುದರಿಂದ ವಾಸ್ತವ ತಿಳಿಯುವುದಲ್ಲದೆ, ನಮ್ಮಿಂದ ಮುಂದಾಗುವ ತಪ್ಪುಗಳನ್ನು ಆಗದಂತೆ ಜಾಗೃತಗೊಳ್ಳಲು ನೆರವಾಗಲಿದೆ. ಹೀಗಾಗಿ ಎಲ್ಲ ಹಿಂದೂ ಸಹೋದರ, ಸಹೋದರಿಯರು ಕುಟುಂಬ ಸಮೇತ ತೆರಳಿ ವೀಕ್ಷಿಸಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ವೀಕ್ಷಣೆ ಮಾಡಿ ಎಂದು ಶಾಸಕರ ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ್ ಅಣ್ಣಿಗೇರಿ ಸೇರಿದಂತೆ ಮತ್ತಿತರರು ಇದ್ದರು.