ನಿಸ್ವಾರ್ಥದಿಂದ ಸೇವೆ ಮಾಡಿದರೆ ಗೌರವ ಬರುತ್ತದೆ

ಚಾಮರಾಜನಗರ, ಮಾ.26- ನಿಸ್ವಾರ್ಥದಿಂದ ಸೇವೆ ಮಾಡಿದರೆ ಗೌರವ ಹಾಗೂ ಸನ್ಮಾನಗಳು ಅರಸಿ ಬರುತ್ತದೆ. ಆದರೆ ಅಪೇಕ್ಷೆ ಇಟ್ಟು ಕೆಲಸ ಮಾಡಿದರೆ ನಿರರ್ಥಕ. ಶರಣರ ವಾಣಿಯಂತೆ ಇದ್ದಷ್ಟು ದಿವಸ ಪರೋಪಕಾರಕ್ಕಾಗಿ ಜೀವಿಸಬೇಕು ಎಂದÀು ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕøತರಾದ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾದ ಡಾ.ಪರಮೇಶ್ವರಪ್ಪ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರದನಹಳ್ಳಿ ಚೆಸ್ಕಾಂ ಉಪವಿಭಾಗದ ಎಇಇ ದ್ರುಪದ್ ಹಾಗೂ ಶಾಖಾಧಿಕಾರಿ ವಸಂತ್ ಅವರು ಹರದನಹಳ್ಳಿಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿವೃತ್ತಿ ನಂತರವೂ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಭಿಮಾನದಿಂದ ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ರೈತರು ಹಾಗೂ ಯೋಧರು ನಮ್ಮ ದೇಶದ ಎರಡು ಕಣ್ಣುಗಳಂತೆ ಹೀಗಾಗಿ ಇವರನ್ನು ಪ್ರತಿ ದಿನ ಗೌರವಿಸಿ ಸ್ಮರಿಸಬೇಕಾದ ಕೆಲಸವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹರದನಹಳ್ಳಿ ಚೆಸ್ಕಾಂ ಉಪವಿಭಾಗದ ಹಿರಿಯ ಸಹಾಯಕ ತಿಮ್ಮರಾಜು, ಕಿರಿಯ ಸಹಾಯಕ ಮಹದೇವಸ್ವಾಮಿ, ನಗದು ಗುಮಾಸ್ತ ಪ್ರಭುಸ್ವಾಮಿ, ಗುತ್ತಿಗೆದಾರರಾದ ಸಂಪತ್ತು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.