
ತಾಳಿಕೋಟೆ:ಜು.9: ಡಾ.ಹೆಡಗೇವಾರ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಬಿಸಿದರು ಆದರೆ ಅವರು ಶ್ರೀಮಂತರಾಗಿದ್ದಿಲ್ಲಾ ಸಮರ್ಪಿತ ಭಾವಗಳ ವ್ಯಕ್ತಿಗಳನ್ನು ತಯಾರ ಮಾಡುವದರೊಂದಿಗೆ ಸಂಘದ ಸಂಘಟನಾ ಶಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಉತ್ತರ ಕರ್ನಾಟಕ ಪರಿಸರ ಗತಿವಿದಿ ಪ್ರಾಂಥ ಸಂಯೋಜಕರಾದ ಸುರೇಶ ನಿಂಗಪ್ಪನವರ ಅವರು ಹೇಳಿದರು.
ಶನಿವಾರರಂದು ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಗುರುಪೂಜಾ ಉತ್ಸವದಲ್ಲಿ ವಕ್ತಾರರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬಹಳಷ್ಟು ಅಧ್ಯಾಯ ನಡೆಸಿದ ಡಾಕ್ಟರಜೀ ಅವರು ದೇಶ ರಕ್ಷಣೆಗಾಗಿ ನಿಸ್ವಾರ್ಥತೆಯಿಂದ ಮಾಡುವ ವ್ಯಕ್ತಿಗಳನ್ನು ಸಂಘಟಿಸಿ ಸಂಘಟನೆಯನ್ನು ಪ್ರಾರಂಬಿಸಿದ್ದರಿಂದ ಅಂದಿನಿಂದ ಸಂಘದಿಂದ ವ್ಯಕ್ತಿ ನಿರ್ಮಾಣ ಕಾರ್ಯ ಮಾಡುತ್ತಾ ಸಾಗಿದರು. ಸ್ವತಂತ್ರವಾಗಿರಬೇಕು ಯಾರ ಹಂಗಿನಲ್ಲಿ ಇರಬಾರದೆಂಬ ಉದ್ದೇಶ ಡಾಕ್ಟರ್‍ಜಿ ಅವರದ್ದಾಗಿತ್ತು ತಮ್ಮತನದಿಂದ ಸಮರ್ಪಣಾ ಭಾವನೆಯಿಂದ ಅರ್ಪಣಾ ಮಾಡಬೇಕೆಂದು ಉದ್ದೇಶ ಹೊತ್ತು 1927ನೇ ಸಾಲಿನಿಂದ ಗುರುಪೂಜಾ ಉತ್ಸವವನ್ನು ಪ್ರಾರಂಬಿಸಿದರೆಂದರು. ಇದಕ್ಕೆ ಗುರುಪೂರ್ಣಿಮಾ ವ್ಯಾಸ ಪೂರ್ಣಿಮ ಎಂದು ಕರೆಯುತ್ತಾರೆಂದು ಹೇಳಿದ ಸುರೇಶ ಅವರು ಇಂದಿನ ಸ್ಥಿತಿಗತಿ ಹಾಗೂ ಹಿಂದಿನ ಸ್ಥಿತಿಗತಿ ಕುರಿತು ವಿವರಿಸಿದರಲ್ಲದೇ ಭಕ್ತಿ ಭಾವನೆ ಎಂಬುದು ಇಂದು ಕಂಡು ಬರುತ್ತಿಲ್ಲಾವೆಂದ ವಿಷಾದ ವ್ಯಕ್ತಪಡಿಸಿದ ಅವರು ಸ್ವಯಂ ಸೇವಕರು ಸಮರ್ಪಿತ ಜೀವನ ನಡೆಸಿದ್ದಾರೆ ಇದರಿಂದಲೇ ದೇಶ ಉಳಿಯಲು ಸಾಧ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದರ ಸೇವೆ ಕುರಿತು ತಿಳಿ ಹೇಳಿದರಲ್ಲದೇ ಸಂಸ್ಕಾರವೆಂಬುದು ಎಲ್ಲಿ ಹೋಗಿಲ್ಲಾ ಅದನ್ನು ಅಳವಡಿಸಿಕೊಳ್ಳುವ ಶಕ್ತಿ ನಮ್ಮಲ್ಲಿದೆ ಕಾರಣ ವಾಹನ ಪ್ರಸ್ಥಾಶ್ರಮದಲ್ಲಿಯೂ ಸಂಸ್ಕಾರ ಕುರಿತು ಯುವಜನತೆ ತಿಳಿ ಹೇಳುವ ಕಾರ್ಯವಾಗಬೇಕು ಒಡೆದು ಹೋಗುತ್ತಿರುವ ಕುಟುಂಭಗಳ ರಕ್ಷಣೆ ನಡೆಯಬೇಕು ಒಳ್ಳೆಯ ಸಂದಾನ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ಕೊಡಬೇಕೆಂಬುದರ ಬಗ್ಗೆ ಕಾರ್ಯ ಮಾಡಲು ಮುಂದಾಗಬೇಕೆಂದ ಅವರು ಪರಿಸರ ಬೆಳವಣಿಗೆಯಿಂದ ನಮ್ಮ ಮುಂದಿನ ಜೀವನ ವ್ಯವಸ್ಥಿತವಾಗುತ್ತದೆ ಎಂದು ಗ್ರಾಮ ವಾಸ್ತವ್ಯ ಕುರಿತು ತಿಳಿ ಹೇಳಿದ ಅವರು ಅಳಿಲು ಸೇವೆಯಲ್ಲಿಯೇ ಶಕ್ತಿ ಮೀರಿ ಸೇವಾ ಕಾರ್ಯಕ್ಕೆ ಮುಂದಾಗಬೇಕೆಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅವರು ಮಾತನಾಡಿ ಗುರುವಿಗೆ ವಿಶೇಷ ಸ್ಥಾನಮಾನವಿದೆ ಗುರುಪೂಜೆ ಎಂದರೆ ವೇದ ವ್ಯಾಸರನ್ನು ನೆನಪಿಸುವದ್ದಾಗಿದೆ ಗುರು, ಬ್ರಹ್ಮ, ವಿಷ್ಣುವಿಗೆ ಹೋಲಿಸಲಾಗುತ್ತದೆ ಉರು ಎಂದರೆ ದೇವರ ಸಮಾನ ದೇವರಿಗಿಂತ ಮಿಗಿಲು ಎಂದು ಹೇಳಲಾಗುತ್ತದೆ ಅಕ್ಷರ ಅಷ್ಟೇ ಅಲ್ಲಾ ಸಂಸ್ಕಾರ ಕಲಿಸಿದವನಿಗೆ ಗುರು ಎನ್ನಲಾಗುತ್ತದೆ ಗುರುಪೂರ್ಣಿಮಾ ದಿನದಂದು ಗುರುವಿಗೆ ನಮನ ಸಲ್ಲಿಸಲು ಶಾಲೆ ಕಾಲೇಜುಗಳಲ್ಲಿ ಗುರುಪೂರ್ಣಿಮಾ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದ ಅವರು ಏಕಲವ್ಯ ಗುರು ದ್ರೋಣಾಚಾರ್ಯರ ಶಕ್ತಿಯನ್ನು ಭಕ್ತಯಿಂದಲೇ ಗೆಲುವಿಗೆ ಪಾತ್ರವಾಗಿದ್ದರ ಕುರಿತು ವಿವರಿಸಿದ ಜಾಲವಾದಿ ಅವರು ಕೃತಕ ಬುದ್ದಿ ಯೋಚನಾ ಶಕ್ತಿ ಗ್ರಂಥಗಳ ಕುರಿತು ತತ್ವಜ್ಞಾನದ ಪುಸ್ತಕ ವಿಶ್ಲೇಸುವ ಕುರಿತು ಗುರು ಮಾಡುವ ಸೇವಾ ಕಾರ್ಯ ಕುರಿತು ತಿಳಿ ಹೇಳಿದ ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ತಾಯಿಯೇ ಮೊದಲನೇಯ ಗುರುವಾಗಿ ಹಿಂದೂವೀ ಸಾಮ್ರಾಜ್ಯ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದರ ಕುರಿತು ವಿವರಿಸಿದ ಅವರು ತಾಯಿಯ ಕೌಶಲ್ಯದ ವಿಚಾರಗಳು ಗುರುವನ್ನು ಗೌರವಿಸುವ ಕುರಿತು ಬಹುಮಾರ್ಮಿಕವಾಗಿ ವಿವರಿಸಿದರಲ್ಲದೇ ದೇಶ ರಕ್ಷಣೆಗಾಗಿ ಅಂದು ಮುಂದಾಗಿದ್ದ ಮಹಾರಾಣಾಪ್ರತಾಪಸಿಂಹ್ ಅವರ ಶಿವಾಜಿ ಮಹಾರಾಜರ ಸಂಕ್ಷೀಪ್ತ ಚರೀತ್ರೆ ವಿವರಿಸಿದ ಅವರು ಶಾಂತಿಯ ಏಳಿಗೆ ಒಳಗೊಂಡ ಅನೇಕ ಶಕ್ತಿಯ ಸಂಖ್ಯೇತ ಭಗವಾದ್ವಜವಾಗಿದೆ ಭಗವಾದ್ವಜವೆಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುವಾಗಿದೆ ಎಂದರು.
ಕಾರ್ಯಕ್ರಮದ ಮೊದಲಿಗೆ ದ್ವಜಾರೋಹಣ ಜರುಗಿತಲ್ಲದೇ ನಂತರ ಭಾರತಮಾತೆಯ ಡಾಕ್ಟರ್ ಹೆಡಗೇವಾರರ, ಹಾಗೂ ಗುರುಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ಉಪಸ್ಥಿತ ಸ್ವಯಂ ಸೇವಕರೆಲ್ಲರೂ ತಮ್ಮ ಶಕ್ತಿಗನುಗುಣವಾಗಿ ಗುರುದಕ್ಷೀಣೆ ನೀಡಿ ಭಕ್ತಿಭಾವ ಮೆರೆದರು.
ಅತಿಥಿ ಮಹೋದಯರಿಗೆ ಹಿರಿಯ ಸ್ವಯಂ ಸೇವಕ ಬಾಳು ಬಕ್ಷೀ ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.