ನಿಸರ್ಗದ ಬದಲಾವಣೆ ಮುನ್ಸೂಚನಯೇ ಯುಗಾದಿ: ಬಸವರಾಜ ಚೌಕಿಮಠ

ವಿಜಯಪುರ,ಏ.13: ಜನ ಸಾಮಾನ್ಯರು ಸಹ ನಿಸರ್ಗದಲ್ಲಾಗುವ ಬದಲಾವಣೆಯಿಂದಲೆ ಯುಗಾದಿ ಹಬ್ಬವನ್ನು ಗುರುತಿಸುತ್ತಾರೆ. ಸನಾತನ ಸಂಸ್ಕøತಿಯ ಸಂವತ್ಸರದ ಆರಂಭದ ಹಬ್ಬವೆ ಯುಗಾದಿ ಎಂದು ವಿಶ್ರಾಂತ ಡಿ.ಎಸ್.ಪಿ ಬಸವರಾಜ ಚೌಕಿಮಠ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇವು ಬೆಲ್ಲದ ಸಂಕೇತವಾಗಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವಲ್ಲಿ ಯುಗಾದಿ ವೈಶಿಷ್ಟ್ಯವನ್ನು ಪಡೆಡುಕೊಂಡಿದೆ. ಕವಿಗಳು ವಾಚನ ಮಾಡಿರುವ ಕವನಗಳನ್ನು ಮೆಲುಕು ಹಾಕುತ್ತಾ ಕಾವ್ಯ ರಚಿಸುವ ಸಾಮಥ್ರ್ಯ ನಿರಂತರ ಅಧ್ಯಯನ ಶೀಲತೆಯಿಂದ ಪಡೆಯಬಹುದು ಎಂದರು.
ಸÀಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಈರಣ್ಣ ಬಿರಾದಾರಗೌಡರ ಮಾತನಾಡಿ, ಕವಿತೆ ಹುಡುಗಾಟವಲ್ಲ, ಅದೊಂದು ಹುಡುಕಾಟ. ಕವಿಯಾದವನು ನಿರಂತರ ಸಂಶೋಧಕನಾಗಿರಬೇಕು. ಸಮಾಜ ತಿದ್ದುವ ಕಾವ್ಯಗಳು ಇಂದು ಅತ್ಯಂತ ಅವಶ್ಯಕವಾಗಿವೆ. ಯುವ ಸಾಹಿತಿಗಳನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರುವಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಕಸಾಪದಲ್ಲಿ ಯುಗಾದಿ ಕಾವ್ಯ ಸಂಭ್ರಮ ಹಮ್ಮಿಕೊಂಡಿದ್ದು ಸಂತೋಷನ್ನುಂಟು ಮಾಡಿದೆ. ಜಿಲ್ಲಾದ್ಯಂತ ಎಲೆಮರೆಯ ಕಾಯಿಯಂತಿರುವ ಯುವ ಪ್ರತಿಭಾವಂತ ಕವಿಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಜ್ಯೋತಿ ಚೌಕಿಮಠ ಕವಿಗಳಿಗೆ ಸನ್ಮಾನಿಸಿದರು.
ಗುರಣ್ಣ ಹಂಚನಾಳ .ಇಸಾಕ ಸಾರವಾಡ. ಅಭಿμÉೀಕ ಚಕ್ರವರ್ತಿ ವೇದಿಕೆಯಲ್ಲಿದ್ದರು. ಪೆÇ್ರ ಸುಭಾಶ್ಚಂದ್ರ ಕನ್ನೂರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಡಾ .ಮಾಧವ ಗುಡಿ ಮಾತನಾಡಿದರು. ಶ್ವೇತಾ ಮೂಲ್ಕಿ ಪಾಟೀಲ ನಿರೂಪಿಸಿದರು. ಸುರೇಶ ಜತ್ತಿ ವಂದಿಸಿದರು.
ಶಿಲ್ಪಾ ಹಂಜಿ. ಶೋಭಾ ಮೇಡೆಗಾರ. ವಿದ್ಯಾ ಕಲ್ಯಾಣಶೆಟ್ಟಿ. ರುದ್ರಮ್ಮ ಗಿಡ್ಡಪ್ಪಗೋಳ. ಶಿಲ್ಪಾ ಬಸ್ಮೆ. ಶಿವಲೀಲಾ ಕೊರವಾರ. ಶಿವಲೀಲಾ ಕೋರಿ, ಶಾಂತಲಾ ಪಾಟೀಲ. ಸಿದ್ದನಗೌಡ ಕಾಶಿನಕುಂಟೆ. ಮಡಿವಾಳಮ್ಮ ನಾಡಗೌಡ. ಶಿವಾಜಿ ಮೋರೆ. ಶ್ರೀಕಾಂತ ಮಾದರ. ಪ್ರತಿಭಾ ತೊರವಿ. ರಜಿಯಾ ದಳವಾಯಿ. ಶೋಭಾ ಹರಿಜನ. ಜಿ.ಪಿ. ಬಿರಾದಾರ. ಸಾವಿತ್ರಿ ಮಾನೋಜಿ. ಜಗದೀಶ ಬಿರಾದಾರ. ರೂಪಾ ರಜಪೂತ. ಅನ್ನಪೂರ್ಣ ಚೋಳಕೆ. ಕಾಶಿರಾಯ ಹತ್ತಳ್ಳಿ. ಲಕ್ಷ್ಮಿ ಕಾತ್ರಾಳ. ಆನಂದ ಪೂಜಾರಿ, ಪಾರ್ವತಿ ಸೊನ್ನದ ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಹಾಸಿಂಪೀರ ವಾಲಿಕಾರ, ಡಾ. ಸಂಗಮೇಶ ಮೇತ್ರಿ. ಕಮಲಾ ಮುರಾಳ. ರಾಜೇಸಾಬ ಶಿವನಗುತ್ತಿ. ಜಿ.ಎಸ್ ಬಳ್ಳೂರ. ರಜಾಕ ಮುಲ್ಲಾ. ಯಾಕೂಬ್ ನಾಟೀಕಾರ. ಲತಾ ಗುಂಡಿ, ಸತ್ಯಣ್ಣ ಹಡಪದ. ಅವಿನಾಶ ಧನ್ಯಾಳ. ಅಣ್ಣುಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.