ನಿಷ್ಠೆ ಸೇವೆಯಿಂದ ಅಭಿವೃದ್ಧಿ ಸಾಧ್ಯ: ಶಿಕ್ಷಣಾಧಿಕಾರಿ

(ಸಂಜೆವಾಣಿ ವಾರ್ತೆ)
ಚಿತ್ತಾಪೂರ: ಸೆ.19:ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ನಮಗೆ ಸಿಕ್ಕ ಸೇವೆಯನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವಿರಯ್ಯ ಸ್ವಾಮಿ ರುದನೂರು ಹೇಳಿದರು.
ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ಯ ಸರ್ದಾರ್ ವಲ್ಲಭಭಾಯ್ ಪಟೇಲ್, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶ ಎಂದು ಕರೆಯುತ್ತಾರೆ ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಇಚ್ಛಾಶಕ್ತಿಯ ಕೊರತೆಯಾಗಿದೆ ಹೀಗಾಗಿ ಸೋಮಾರಿಗಳಾಗದೆ ಶ್ರಮಜೀವಿಗಳಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಇಚ್ಛಾಶಕ್ತಿಯಿಂದ ಈ ಭಾಗಕ್ಕೆ 371ನೇ ವಿಧಿ ಕಲಂ ಜಾರಿಯಾಗಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ಸಿಗುವಂತಾಗಿದೆ. ಅದರ ಸದುಪಯೋಗ ನಾವು ನೀವೆಲ್ಲರೂ ಪಡೆಯುತ್ತಾ ಈ ಭಾಗದ ಅಭಿವೃದ್ಧಿಯತ್ತ ಸಾಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಸೈಯದ್ ಷಾಸಾವಲಿ, ತಾಪಂ ಇಓ ನೀಲಗಂಗಾ ಬಬಲಾದ್, ಸಿಪಿಐ ಪ್ರಕಾಶ್ ಯಾತನೂರ, ಉಪನ್ಯಾಸಕರಾದ ಶಂಕರ್ ಬಡಿಗೇರ್, ಪ್ರಲ್ಹಾದ ನಾಗಣ್ಣ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೊಂಡಗಿ, ಪಾಶಾಮಿಯ ಖುರೇಶಿ, ಮಹ್ಮದ್ ರಶೂಲ್ ಸೇಠ್, ವೇದಿಕೆ ಮೇಲಿದ್ದರು ಅಧಿಕಾರಿಗಳಾದ ಸಿಆರ್ ಪಿ ಮಲ್ಲಿಕಾರ್ಜುನ ಸೇಡಂ, ಪ್ರಕಾಶ್ ನಾಯ್ಕೋಡಿ, ಶರಣಪ್ಪ ವಾಘ್ಮೋರೆ, ವಿಜಯಕುಮಾರ, ಸಂಜುಕುಮಾರ ಮಾನಕರ್, ಶಂಕರ್ ಕಣ್ಣೆ, ಸಂತೋಷ ಕುಮಾರ್ ಶಿರನಾಳ್ ಸೇರಿದಂತೆ ಇತರರು ಇದ್ದರು.