
ಭಾಲ್ಕಿ:ಮಾ.6: ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ 48ನೇ ಶ್ರೀಮತಿ ಸಂಗೀತಾ ಸುರೇಶ್ ಪುರಂತ ಅವರ ಮನೆಯಲ್ಲಿ ಜರುಗಿತು. ಪೂಜ್ಯ ಶ್ರೀ ಡಾಕ್ಟರ್ ಬಸವಲಿಂಗ ಪಟ್ಟದೇವರು ಅವರ ದಿವ್ಯ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು. ಹೊನ್ನಮ್ಮ ಪುರಂತ ಪರಿವಾರದಿಂದ ಗುರು ಬಸವ ಪೂಜೆ ನೆರವೇರಿತು. ಶ್ರೀಮತಿ ವಿಜಯಲಕ್ಷ್ಮಿ ಗುರುನಾಥ ಗಡ್ಡೆ ಅವರು ಶರಣರ ಆರ್ಥಿಕ ನೀತಿ ಕುರಿತು ಬಹಳ ಸುಂದರವಾಗಿ ಅನುಭಾವ ಹೇಳಿದರು.
ಕಾಶಿ ಕೇದಾರ ಪುಣ್ಯ ಕ್ಷೇತ್ರಗಳಲ್ಲಾ ಭಕ್ತರ ಮನೆಯಂಗಳವೇ ವಾರಣಾಸಿ. ಎಂದು ನಮ್ಮ ಶರಣರು ತತ್ವ ಸಿದ್ಧಾಂತಗಳನ್ನು ನೀಡಿದ್ದಾರೆ. ಅದಕ್ಕಾಗಿಯೇ ನಮ್ಮ ಪೂಜ್ಯ ಶ್ರೀ ಡಾಕ್ಟರ್ ಬಸವಲಿಂಗ ಪಟ್ಟದೇವರು “ಮನೆಗೊಂದು ಅನುಭವ ಮಂಟಪ” ಶರಣರ ಮನೆಯೇ ಪುಣ್ಯಕ್ಷೇತ್ರವಾಗಿ ಮಾಡಿ ಪಾವನಗೊಳಿಸಿದ್ದಾರೆ. ಈಗಿನ ದಿನಮಾನದಲ್ಲಿ ಹಣಕ್ಕೆ ಬೆಲೆ ಇಲ್ಲದಂತಾಗಿದೆ. ಅದೇ 20 ವರ್ಷದ ಕೆಳಗೆ 2ರೂ. ಯಾರಾದರೂ ನಮಗೆ ಕೊಟ್ಟರೆ ಅದೇ ಸ್ವರ್ಗ, ವರ್ಷಕ್ಕೆ ಒಂದು ಜೊತೆ ಬಟ್ಟೆ ಅದೇ ಎಲ್ಲಾ ಹಬ್ಬ ಹರಿದಿನಗಳಿಗೆ ಉಟ್ಟಿಕೊಳ್ಳಬೇಕು. ಆದರೆ ಇವಾಗ ಎಸ್ಟೇ ಬೆಲೆಬಾಳುವ ವಸ್ತುಗಳನ್ನು ಉಡುಗೆಗಳನ್ನು ನೀಡಿದರು ಸಂತೃಪ್ತಿಯಿಲ್ಲ ಹಣದ ಮಹತ್ವ ಅದರ ಬೆಲೆ ಇಲ್ಲದಂತಾಗಿದೆ. ಆದರೆ 12ನೆಯ ಶತಮಾನದಲ್ಲಿ ಯಾವಾಗ ಬಸವಣ್ಣ ನವರು ಬಿಜ್ಜಳನ ಆಸ್ಥಾನಕ್ಕೆ ಬಂದು ಕರಣಿಕ ಕೆಲಸ ಮಾಡಿದರು, ಅವರ ಕಾಯಕ ನಿಷ್ಠೆ ಪ್ರಾಮಾಣಿಕತೆ ಗಮನಿಸಿ ಅವರಿಗೆ ಮಂತ್ರಿ ಪದವಿ ನೀಡಲಾಗುತ್ತದೆ. ಆವಾಗ ಬಸವಣ್ಣ ನವರು ಎಲ್ಲೆಡೆ ಅಡ್ಡಾಡಿ ದಲಿತರು ಹಿಂದುಳಿದವರನ್ನು ಬೇಟಿಮಾಡಿ ಜಾತಿ ನಿರ್ಮೂಲನೆಗೆ ಮುಂದಾಗುತ್ತಾರೆ. ಕಾಯಕವೇ ಕೈಲಾಸ ಆತನ ವೃತ್ತಿಯೆ ಆತನ ಜಾತಿ ಎಂದು ಹೇಳಿ ಕಾಸಿ ಕಮ್ಮಾರನಾದ, ವೇದವನ್ನು ಓದಿ ಹಾರುವನಾದ ಎಂದು ಹೇಳಿ ಜಾತೀಯತೆಯನ್ನು ನಿರ್ಮೂಲನೆ ಮಾಡಿದರು. ನಂತರ ಬಸವಣ್ಣನವರು ಅಲ್ಲಿನ ಜನರು ಅನ್ನಕ್ಕಾಗಿ ಹಸಿವಿನಿಂದ ಪರಿತಪಿಸುವುದನ್ನು ಕಂಡು ದಾಸೋಹ ವವಸ್ಥೆ ಮಾಡಿದರು. ಬರೀ ಇದ್ದವರಸ್ಟೇ ಅಲ್ಲಾ ಎಲ್ಲರೂ ತಮ್ಮ ತಮ್ಮ ಕಾಯಕ ನಿಷ್ಠೆ ಪ್ರಾಮಾಣಿಕತೆ ಯಿಂದ ಮಾಡಿ ಅದರಲ್ಲಿ ಬಂದ ಹಣದಿಂದ ದಾಸೋಹವನ್ನು ಮಾಡಲು ಕರೆನೀಡಿದರು. ತ್ರೀ ಲಿಂಗ ಪೂಜೆ ತ್ರಿವಿಧ ದಾಸೋಹ ತತ್ವಗಳನ್ನು ನೀಡಿ ಜನರಿಗೆ ನೆಮ್ಮದಿಯ ಬದುಕು ನೀಡಿದವರು ಬಸವಣ್ಣ ನವರು ಎಂದು ಹೇಳಿದರು.
ಪ್ರಾರ್ಥನೆಯನ್ನು ಶರಣೇ ಶ್ರೀದೇವಿ ಶಾಂತಯ್ಯ ಸ್ವಾಮಿ ಮಠಪತಿ ನಡೆಸಿದರು. ಶರಣೆ ಸಾವಿತ್ರಿ ಧನರಾಜ ಪಾಟೀಲ್ ವಚನ ಪಠಣ ಮಾಡಿದರು. ಸಂಗೀತಾ ಸುರೇಶ್ ಪುರಂತ ವಚನ ಗಾಯನ ಮಾಡಿದರು. ವಿನಾಯಕ ಚೌದ್ರಿ, ಕಮಲಾಕರ್ ಕುಲಕರ್ಣಿ, ವಿಷ್ಣು ಎಸ್ ಪಾಂಚಾಳ, ಗಿರಿ ಮಹಾರಾಜ್, ಗುರುದೇವ್ ಭಜನ್ ಮಂಡಳ ಸಂಗಡಿಗರಿಂದ ವಚನ ಸಂಗೀತ ನೆರವೇರಿತು. ಶ್ರೀ ಬಸವರಾಜ ಮರೆಯ ಅವರು ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ರುಮ್ಮ, ಚಂದ್ರಕಲಾ, ವೈಶಾಲಿ, ಸುಪ್ರಿಯಾ, ಸವಿತಾ, ಮಂಗಲಾ, ಬಸಮ್ಮ, ಜಗದೇವಿ ಮೂಲ್ಗೆ, ರೂಪಾದೇವಿ ಬಿಡುವೆ, ಸುಮಿತ್ರಾ ವಾಡೆ, ಮಹಾನಂದಾ ಅಂಬರಶೆಟ್ಟಿ. ಸರಸ್ವತಿ ಪನಶೆಟ್ಟಿ, ರಾಣಿ ಮಡಿಕೆ, ಮಂಗಲಾ ಪಾಟೀಲ್, ಸವಿತಾ ಸ್ವಾಮಿ, ಮಹಾನಂದ ಚಿಟ್ಗುಪ್ಪೆ, ಪ್ರೇಮಲತಾ ಎಂ. ಶ್ರೀಮಂತ ಪಾಟೀಲ್, ಮಹಾದಪ್ಪ ಬುಕ್ಕ, ಅಶ್ವಿನಿ ಅಮರ್ ಭೌರ, ಚನ್ನಬಸವ ಸಿ ಸ್ವಾಮಿ, ಡಾ. ರಾಜಶೇಖರ್ ಮಠಪತಿ, ಶಿವಲಿಂಗಯ್ಯ ಸ್ವಾಮಿ, ಶರಣಪ್ಪ ಎo. ಬಿರಾದರ್, ಶ್ರೀದೇವಿ ರಮೇಶ್ ಕರ್ಕಳೆ, ಶ್ರೀದೇವಿ ಪ್ರಭು ಪಂಚಾಕ್ಷರಿ, ಶಿಲ್ಪಾ ಓಂಕಾಂತ ಚಿಂಚೋಳಿ, ವೀರಣ್ಣ ಕುಂಬಾರ್, ಲಕ್ಷ್ಮಣ ವಾಡೆ, ಪ್ರಭು ಕಂಟಪ್ಪ, ಕಲ್ಯಾಣ ಕುಂಬಾರಗೆರೆ, ಧನರಾಜ್ ಬಂಬುಳಗೆ, ರಮೇಶ್ ಭರ್ಮ, ಗುರುನಾಥ್ ಪವಡಶೆಟ್ಟೆ, ಬಸವರಾಜ ಯಾಲ, ಬಸವರಾಜ್ ಚಳಕಾಪುರ, ಪ್ರಭಾಕರ್ ಬೆಳಕೇರೆ, ಪ್ರಜ್ವತ್ ಮೀನಕೆರೆ, ಅಮರ್ ಭೌರ ಅನೇಕರು ಉಪಸ್ಥಿತರಿದ್ದರು. ವೇದಿಕೆ ಮೇಲಿದ್ದ ಎಲ್ಲರನ್ನು ಗೌರವಿಸಲಾಯಿತು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.