(ಸಂಜೆವಾಣಿ ವಾರ್ತೆ)
ಹುಮನಾಬಾದ:ಜೂ.6:ಸರ್ಕಾರಿ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಲ್ಲಿಸುವ ಸೇವೆ ಸಮಾಜದಲ್ಲಿ ಗೌರವ ಹೆಚ್ಚಿಸುವ ಜತೆಗೆ ನೆಮ್ಮದಿ ಜೀವನಕ್ಕೆ ದಾರಿ ಆಗಲಿದೆ ಎಂದು ರೇಷ್ಮೆ ಇಲಾಖೆ ತಾಲೂಕ ಅಧಿಕಾರಿ ಡಿ.ಬಿ.ಪಾಟೀಲ ಹೇಳಿದರು.
ಪಟ್ಟಣದ ರೇಷ್ಮೆ ಕಚೇರಿಯಲ್ಲಿ ಹಮ್ಮಿಕೊಂಡ ಸೇವಾ ನಿವೃತ್ತ ರವೀಂದ್ರ ಕೋಪಾಣಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ರವೀಂದ್ರ ಕೋಪಾಣಿ ಹಿರಿಯರು ಇಲಾಖೆಯ ಅನುಭವಿಗಳು ಸರ್ಕಾರಿ ಸೇವೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದರೂ, ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು. ಮಾತಿಗಿಂತ ಕೃತಿ ಲೇಸು ಎನ್ನುವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟವರು. ರೈತರಿಗೆ ಒಳ್ಳೆಯ ಸಂದೇಶ ನೀಡುವ ಮುಖಾಂತರ ಶ್ರಮಿಸಿದ್ದಾರೆ ಹಾಗೂ ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ, ಅವರ ಮಹತ್ವಾಕಾಂಕ್ಷೆ ಈಡೇರಲಿ ಎಂದು ಶುಭ ಹಾರೈಸುವೆ ಎಂದು ತಿಳಿಸಿದರು.
ರೇಷ್ಮೇ ತಾಂತ್ರಿಕ ಸೇವಾ ಕೇಂದ್ರದ ಪ್ರವರ್ತಕರಾದ ರವೀಂದ್ರ ಕೋಪಾಣಿ ಮಾತನಾಡಿದರು.
ಸರ್ಕಾರಿ ಸೇವೆ ನನಗೆ ಸಂತೃಪ್ತಿ ನೀಡಿದ್ದರೂ, ಸಮಾಜ ಸೇವೆಗೆ ಮನಸ್ಸು ತುಡಿಯುತ್ತಿದೆ ಎಂದು ಅವರು ರೇಷ್ಮೆ ಇಲಾಖೆಯ ಪ್ರವರ್ತಕರಾಗಿ ಸುದಿರ್ಘ 42 ವರ್ಷಗಳ ವಯೋನಿವೃತ್ತಿ ಪಡೆದ ಕಾರಣ ತಾಲೂಕು ಆಡಳಿತ ರೇಷ್ಮೇ ಇಲಾಖೆಯಲ್ಲಿ ಏರ್ಪಡಿಸಲಾಗಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಪಡೆದು, ಅವರು ಹೇಳಿದರು.
ಸಾರ್ವಜನಿಕರ ಹಾಗೂ ಬಡಜನರ ಸೇವೆಗೆ ಸರ್ಕಾರಿ ನೌಕರಿ ಒಂದು ಬಹುದೊಡ್ಡ ಅವಕಾಶವಾಗಿದ್ದು, ನಾನು ಪ್ರವರ್ತಕ ಅಧಿಕಾರಿಯಂತಹ ಹುದ್ದೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಸಂತೃಪ್ತಿ ನನಗಿದೆ. ಸೇವೆಯಲ್ಲಿ ಪ್ರಾಮಾಣಿಕತೆ ಇದ್ದಲ್ಲಿ, ದಕ್ಷತೆ ತಾನೇ ತಾನಾಗಿಯೇ ಬರುತ್ತದೆ. ಮಾನಸಿಕ ನೆಮ್ಮದ್ದಿ ಇದ್ದಲ್ಲಿ ಸುಗಮ ಆಡಳಿತ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರು ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಪಣ ತೊಡಬೇಕು. ಇದರ ಜೊತೆಗೆ ಮಾನವೀಯತೆಗೂ ಮೊದಲ ಆದ್ಯತೆ ನೀಡಬೇಕು. ಸೇವೆಯಲ್ಲಿ ತೃಪ್ತಿ ಇದ್ದರೂ, ಸಮಾಜ ಸೇವೆಗಾಗಿ ನನ್ನ ಮನಸ್ಸು ತುಡಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಯಾವುದೇ ತೊಂದರೆ ಇಲ್ಲದೆ ನಿವೃತ್ತರಾಗುವುದೇ ಒಂದು ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದು ನಿವೃತ್ತ ರವೀಂದ್ರ ಕೋಪಾಣಿ ಅವರು ನುಡಿದರು
ರೇಷ್ಮೆ ಜಿಲ್ಲಾ ನೌಕರರ ಸಂಘ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಪೂಜಾರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚನ್ನಮಲ್ಲಯ್ಯ , ಅನ್ಹೇಲವಾದಿ, ಪ್ರಭು, ಶಿವಕುಮಾರ್,ಕಾಶಿನಾಂದ್ ಸ್ವಾಮಿ, ಬಾಬು, ಅನಿಲ್,ಸುಧಾಕರ್, ಶ್ರೀನಿವಾಸ್ ರೆಡ್ಡಿ, ಚಂದ್ರಕಾಂತ್, ರಾಮಣ್ಣ, ಸಂತೋಷ್ ಬಿರಾದರ್ , ಸಿಬ್ಬಂದಿ ವರ್ಗದವರು ಹಾಗೂ ರೇಷ್ಮೆ ತಾಲೂಕಿನ ರೇಷ್ಮೆ ಬೆಳೆಗಾರರು ಇದ್ದರು.