ನಿಷ್ಠೆಯಿಂದ ಕಾರ್ಯ ಮಾಡಿದಲ್ಲಿ ಯಶಸ್ಸು ಸಾಧ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.11: ಯಾವುದೇ ಕೆಲಸವನ್ನು ಸಂಪೂರ್ಣ ಮಗ್ನರಾಗಿ ಮಾಡಿದರೆ ಯಶಸ್ಸು ನಿಶ್ಚಯ ಎಂದು ವಿ.ಎಸ್.ಕೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ||ನಾಗಭೂಷಣ ಚರಂತಿಮಠ್ ತಿಳಿಸಿದರು. ಅವರು ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ “ನಿಯೋಫೀಯಸ್ಟ-2022” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನೀವು ಮತ್ತು ನಿಮ್ಮ ಉಪಾದ್ಯಾಯರ ಮದ್ಯ ಯಾವುದೇ ಅಡೆತಡೆಗಳಿರಬಾರದು. ಒಂದು ಸಂಸ್ಥೆ ಸಮರ್ಪಕವಾಗಿ ನಡೆಯುತ್ತದೆ ಎಂದರೆ ನಾಲ್ಕು ಆಧಾರ ಸ್ಥಂಭಗಳು ಬಹಳ ಮುಖ್ಯ. ವಿದ್ಯಾರ್ಥಿಗಳು, ಉಪದ್ಯಾಯರು, ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆ ಇವು ನಾಲ್ಕು ಆಧಾರ ಸ್ಥಂಭಗಳು. ಆಮೆ ಮತ್ತು ಮೊಲದ ಕಥೆಯಲ್ಲಿ ಮೊದಲು ನಿಧಾನ ಮತ್ತು ಸ್ಥಿರ ಪ್ರಯತ್ನದಲ್ಲಿ ಆಮೆ ಗೆಲ್ಲುತ್ತದೆ, ಎರಡನೇ ಪೀಳಿಗೆಯಲ್ಲಿ ವೇಗ ಮತ್ತು ಪರಿಪೂರ್ಣತೆಯಿಂದ ಮೊಲ ಗೆಲ್ಲುತ್ತದೆ ಮೂರನೇ ಪ್ರಯತ್ನದಲ್ಲಿ ಬುದ್ದಿವಂತಿಕೆಯಿಂದ ಆಮೆ ಗೆಲ್ಲುತ್ತದೆ, ನಾಲ್ಕನೇ ಪ್ರಯತ್ನದಲ್ಲಿ ಎಲ್ಲರೊಂದಿಗೆ ಸ್ಪರ್ಧಿಸಿದಾಗ ಟೀಂ ವರ್ಕ್‍ನಲ್ಲಿ ಆಮೆ ಮತ್ತು ಮೊಲಗಳ ತಂಡ ಗೆಲ್ಲುತ್ತವೆ. ಅದು ಸೇರಿ ಮಾಡುವ ಕೆಲಸದಲ್ಲಿ ಗೆಲುವನ್ನು ಸೂಚಿಸುತ್ತದೆ ಎಂದು ಕಥೆಯ ಉಧಾಹರಣೆಯೊಂದಿಗೆ ವಿವರಿಸಿದರು. ದಿನವನ್ನು ಮೂರು ಭಾಗಗಳಾಗಿ ಮಾಡಿದರೆ ಎಂಟು ತಾಸು ನಾವು ನಿದ್ದೆಗಾಗಿ ಕಳೆಯುತ್ತೇವೆ ಇನ್ನು ಎಂಟು ತಾಸುಗಳು ನಮ್ಮ ಬೆಳವಣಿಗೆ ಮತ್ತು ಚೇತರಿಕೆಗಳಿಗೆ ಕಳೆಯುತ್ತೇವೆ ಇನ್ನುಳಿದ ಎಂಟು ಘಂಟೆಗಳನ್ನು ಯಾರು ಚೆನ್ನಾಗಿ ಮತ್ತು ಸಮೃಧ್ದವಾಗಿ ಉಪಯೋಗಿಸುತ್ತಾರೊ ಅವರು ಗುರಿ ಮುಟ್ಟುತ್ತಾರೆ ಎಂದರು.
ಯಾರು ಸಬ್‍ಕಾನ್ಸಿಯಸ್ ಮೈಂಡ್ ಮತ್ತು ಕಾನ್ಸಿಯಸ್ ಮೈಂಡ್ ಸೇರಿ ಎರಡನ್ನು ಪ್ರಜ್ಞೆಯಾಗಿ ಉಪಯೋಗಿಸಿಕೊಳ್ಳುತ್ತಾರೊ ಅವರು ವಿಶೇಷ ಪ್ರಜ್ಞಾವಂತರಾಗುತ್ತಾರೆ. ಅದನ್ನೆ ಆಟೋಮಿಕ್ ಹ್ಯಾಬಿಟ್ ಎನ್ನುತ್ತಾರೆ. ಆಲ್ಬರ್ಟ್ ಐನ್‍ಸ್ಟೀನ್‍ರವರ ಮೆದುಳಿನ ಪರೀಕ್ಷೆಯಲ್ಲಿ ಫೆರಿಟಲ್ ಬೆಳವಣಿಗೆ ಹೆಚ್ಚಾಗಿರುವುದು ಅವರ ಬುದ್ದಿಮತ್ಯಗೆ ಕಾರಣವಾಯಿತು ಎಂಬುದು ಕಂಡುಬಂತು.
ನಮ್ಮ ಪ್ರಯತ್ನಗಳಿಗೆ ಪ್ರಾಧಾನ್ಯತೆಗಳನ್ನು ನೀಡಿ ಪ್ರಯತ್ನಿನಸಬೇಕಾಗುತ್ತದೆ. ನಮ್ಮಲ್ಲಿರುವ ಪ್ರತಿಭೆ ಬೆಳೆಸಿಕೊಳ್ಳಲು ಮಾರ್ಗಗಳೆಂದರೆ ಪ್ರೋ ಯಾಕ್ಟೀವ್, ವಿಜನ್, ಟೀಂ ವರ್ಕ್, ವಿನ್‍ವಿನ್ ಯಾಟ್ಟಿಟೂಡ್, ಗ್ರಹಿಸುವಿಕೆ, ಕ್ರೂಡೀಕರಿಸುವಿಕೆ, ಸದಾ ನವೀಕರಿಸುವುದು(ಅಪ್‍ಡೇಷನ್) ಆಗಿರುತ್ತವೆ ಎಂದರು.
ಶ್ರೀ ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗು ಪದವಿ ಕಾಲೇಜಿನ ಪ್ರಾಚಾರ್ಯರು ಆದ ಜಿ. ನಾಗರಾಜ್‍ರವರು ಮಾತನಾಡಿ ವಿಜ್ಞಾನ ವಿಷಯಗಳು ಮುಂದಿನ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಕೆಲಸಗಳನ್ನು ಪಡೆಯಲು ಸಹಾಯವಾಗುತ್ತವೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಎಸ್.ಜಿ.ಟಿ ಸಂಸ್ಥೆಯ ಮುಖ್ಯಸ್ಥರಾದ ಎಸ್.ಎನ್.ರುದ್ರಪ್ಪನವರು ಮಾತನಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ನಾಗಭೂಷಣ್ ರವರು ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ ಎಂದರು. 
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ಆಕರ್ಶಿಸಿದವು. ಕಾರ್ಯಕ್ರಮದಲ್ಲಿ ಎಸ್.ಜಿ.ಟಿ ಪಿ.ಯು ಪ್ರಾಚಾರ್ಯರಾದ ಜಿ.ತಿಪ್ಪೇರುದ್ರ, ಹಿಂದಿನ ಪ್ರಾಚಾರ್ಯರಾದ ಹಯಾತ್ ಹಲಿ, ಪ್ರಾದ್ಯಾಪಕರುಗಳಾದ ರೂಪಾ ಆರ್, ಶ್ರೀದೇವಿ, ಇರ್ಷಾದ್ ಅಲಿ, ರೀನ ಆರ್, ಪವನ್ ಕುಮಾರ್, ಅಖಿಲ ಮುಂತಾದವರು ಭಾಗವಹಿಸಿದ್ದರು. ಸೃಷ್ಠಿ ಕಾರ್ಯಕ್ರಮವನ್ನು ನಿರ್ವಹಿಸಿದರು.