ನಿಷ್ಠೆಯಿಂದ ಕಾಯಕ ಮಾಡಿ ಕಣ್ಣು ತುಂಬಾ ನಿದ್ರೆ ಮಾಡುವನೇ ನಿಜವಾದ ಶ್ರೀಮಂತ: ಎಸ್.ಪಿ.ದಯಾನಂದ

ಕಾಳಗಿ.ಆ.5: ವಿಶ್ವಗುರು ಅಣ್ಣ ಬಸವಣ್ಣನವರು ಹಾಕಿಕೊಟ್ಟ ಕಾಯಕನಿಷ್ಠೆಯನ್ನು ಪರಿಪಾಲಿಸಿ ಕರ್ತವ್ಯಪ್ರಜ್ಞೆಯನ್ನರಿತುಕೊಂಡು ನಮ್ಮ ಕಾಯಕವನ್ನು ಮುಗಿಸಿಕೊಂಡು ಆನಂದದಿಂದ ಕಣ್ಣುತುಂಬ ನಿದ್ರೆಯನ್ನು ಮಾಡುವವನೇ ನೀಜವಾದ ಶ್ರೀಮಂತನು ಎಂದು ಬೆಂಗಳೂರಿನ ಡಿ.ಎಸ್. ಮ್ಯಾಕ್ಸ್ ಕಂಪನಿಯ ಮುಖ್ಯಸ್ಥ ಹೆಸರಾಂತ ಉಧ್ಯಮಿ ಡಾ.ಎಸ್.ಪಿ. ದಯಾನಂದ ಅವರು ತಿಳಿಸಿದರು.

ತಾಲೂಕಿನ ಸುಗೂರ(ಕೆ) ಗ್ರಾಮದಲ್ಲಿ ಬುಧವಾರ ನೇರವೇರಿಸಲಾಗಿರುವ ಗುರುರುದ್ರಮುನೀಶ್ವರ ಸಂಸ್ಥಾನ ಮಠದ ಲಿಂ.ಪೂಜ್ಯ ರುದ್ರಮುನೀಶ್ವರ ಗುರುಗಳ ಗದ್ದುಗೆ ಪುನರ್ ನಿರ್ಮಾಣದ ನೀಲನಕ್ಷೆ ಬಿಡುಗಡೆ ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಅವರು, ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮನುಷ್ಯ ಬದುಕಿನಲ್ಲಿ ಸಾಕಷ್ಠು ಆಸ್ತಿ, ಅಂತಸ್ತು, ಸಿರಿ-ಸಂಪತ್ತು, ಬೆಳ್ಳಿ-ಬಂಗಾರ, ವಜ್ರ, ವೈಢೂರ್ಯಗಳನ್ನು ಸಂಪಾದಿಸಬಹುದು. ಆದರೇ ಆ ವೈಭವಕ್ಕೆ ತಕ್ಕಂತೆ ಸಂಸ್ಕಾರಯುತ ಬದುಕಿಗೆ ಬೇಕಾಗಿರುವ ಜ್ಞಾನ, ಆಚಾರ-ವಿಚಾರ, ದಯೆ-ಧರ್ಮ, ಕರುಣೆ, ಪರೋಪಕಾರ, ದಾನಮಯವಾದ ಬದುಕನ್ನು ಸಂಪಾದಿಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದೊಂದು ದೊಡ್ಡ ಆಸ್ತಿ ಸಂಪಾದಿಸಿದಂತೆ ಎಂದ ಅವರು, ಈ ಎಲ್ಲಾ ಆಚಾರವಿಚಾರಗಳನ್ನು ಮಠ, ಮಂದಿರ, ಹಾಗೂ ಸಂತರ ಸುವಿಚಾರಗಳಿಂದ ಮಾತ್ರ ಪಡೆಯಲು ಸಾಧ್ಯವೆಂದರು.

ಎಷ್ಠೇ ಗಳಿಸಿದರೂ ಹೊಟ್ಟೆ ತುಂಬಾ ಊಟವಿಲ್ಲ. ಕಣ್ಣು ತುಂಬಾ ನಿದ್ರೆಯಿಲ್ಲವೆಂದರೆ ಎಲ್ಲವೂ ನಶ್ವರವಿದ್ದಂತೆ ಎಂದರು.

ತಮ್ಮ ಕಾಯಕದಲ್ಲಿ ಶ್ರದ್ದೇಯನ್ನಿಟ್ಟುಕೊಂಡು ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡದೆ ನಿಷ್ಠೆಯಿಂದ ಕಾಯಕದಲ್ಲಿ ತೊಡಗಿ ಕಣ್ಣು ತುಂಬಾ ನಿದ್ರೆಯನ್ನು ಮಾಡಿದ್ದೆಯಾದರೆ ಅದೇ ನಿಜವಾದ ಶ್ರೀಮಂತಿಕೆ ಎನಿಸಿಕೊಳ್ಳುತ್ತದೆ.

ಇಂದು ಹಣ ಸಂಪಾದನೆ ಮಾಡುವುದರ ಜೆತೆಗೆ ಸರ್ಕಾರಕ್ಕೆ ಕಣ್ಣು ತಪ್ಪಿಸಿ ಕಪ್ಪು ಹಣಸಂಪಾದಿಸುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ಎಂದ ಅವರು, ತಮ್ಮ ಕಂಪನಿಯು ಪ್ರತಿ ವರ್ಷ ಸರ್ಕಾರಕ್ಕೆ 80ಕೋಟಿ ರೂಪಾಯಿಗಳನ್ನು ಟ್ಯಾಕ್ಸ್ ಭರಿಸುತ್ತಿದೆ. ಅಂದರೆ ಪ್ರತಿಯೊಂದು ಕಂಪನಿಗಳಾಗಲಿ, ಪ್ರಮಾಣಿಕತೆಯ ಉಧ್ಯಮಶಿಲತೆಗಳಾಗಲಿ ನಿಷ್ಠೆಯಿಂದ ನಡೆದು ಸರ್ಕಾರಕ್ಕೆ ಮುಟ್ಟಿಸುವ ಹಣ ಸರಿಯಾಗಿ ಭರಿಸಿ, ಆ ದುಡ್ಡು ಸದ್ಬಳಕೆಯಾಗಿದ್ದೆಯಾದರೆ ನಮ್ಮ ದೇಶದ ರಸ್ತೆ, ಚರಂಡಿ, ನೀರಿನ ಕೊಳವೆಗಳು ಬಂಗಾರದಿಂದ ನಿರ್ಮಿಸಬಹುದೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಚಿತ್ತಾಪೂರ ತಹಸೀಲ್ದಾರ ಉಮಕಾಂತ ಹಳ್ಳೆ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದಣ್ಣ ಅಣಬಿ, ಉಧ್ಯಮಿ ಬ್ಯಾಂಕ್ ರೆಡ್ಡಿ, ಮಲ್ಲಿನಾಥ ಕೋಲಕುಂದಿ ಕೋಡ್ಲಿ, ಆರ್ಕಿಟಿಕ್ ಇಂಜೀನಿಯರ್ ರುದ್ರಮುನಿ ಪುರಾಣಿಕ್, ಇಂಟಿರಿಯರ್ ಇಂಜೀನಿಯರ್ ಶ್ರೀಕಾಂತ ವಿಶ್ವಕರ್ಮ, ಸಿದ್ದು ಕೇಶ್ವಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶ್ರೀಮಠದ ಪಿಠಾಧೀಪತಿ ಪೂಜ್ಯ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಆಶಿರ್ವಚನ ನೀಡಿದರು. ಕಾಳಗಿ ತಹಸೀಲ್ದಾರ ನಾಗನಾಥ ತರಗೆ, ಮಲ್ಲಿನಾಥ ಪಾಟೀಲ ಕಾಳಗಿ, ನಾಗೇಶ ಘಂಟಿ, ಕಾಳಗಿ ಗ್ರಾಪಂ.ಮಾಜಿ ಅಧ್ಯಕ್ಷ ಪರಮೇಶ್ವರ ಮಡಿವಾಳ, ಶಿವಶರಣಪ್ಪ ಕಮಲಾಪೂರ, ಹಣಮಂತ ಸೇಗಾಂವಕರ್, ಯಲ್ಲಾಲಿಂಗ ಉನ್ನಿ ಸೇರಿದಂತೆ ನೂರಾರು ಜನ ಭಕ್ತ ಸಮೂಹವು ಲಿಂ.ರುದ್ರಮುನೀಶ್ವರ ಗುರುಗಳ ಗದ್ದುಗೆ ನೀಲನಕ್ಷೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಜಯಕುಮಾರ ಚೆಂಗಟಿ ಸ್ವಾಗತಿಸಿದರು. ಪತ್ರಕರ್ತ ಜಗನ್ನಾಥ ಸೇರಿಕಾರ ನೀರೂಪಿಸಿ ವಂದಿಸಿದರು.