ನಿಷ್ಕಾಮ ಕರ್ಮವೇ ಮೋಕ್ಷಕ್ಕೆ ದಾರಿ


ಧಾರವಾಡ,ಜೂ.4: ಮನಸಿನ್ನಲ್ಲಿ ಮತ್ತೊಬ್ಬರಿಗೆ ಕೇಡು ಬಯಸಬಾರದು, ನಮ್ಮ ಮಾತಿನಿಂದ ಪರರಿಗೆ ನೋವಾಗಬಾರದು. ಈ ರೀತಿಯ ಅಸತ್ಯ ಕರ್ಮದಿಂದ ತಾತ್ಕಾಲಿಕ ಸುಖ ಸಿಗುತ್ತದೆಯೇ ಹೊರತು , ಬದುಕಿಗೆ ಸಮಾಧಾನ ವಿರುವುದಿಲ್ಲ .
ನಿಷ್ಕಾಮ ಕರ್ಮದಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಭಕ್ತಿಯಿಂದ ದೇವರಿಗೆ ನಮಸ್ಕರಿಸಿದರೆ ಅನಂತ ಸುಖ ಶಾಂತಿಗಳು ನಮ್ಮದಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳರು ಹೇಳಿದರು.
ಶ್ರೀಗಳು ಸತ್ತೂರಿನ ನಾರಾಯಣ ಪಾರಾಯಣ ಬಳಗದ, ರಘೋತ್ತಮ ಅವಧಾನಿ ಅವರ ನಿವಾಸದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಂಗಳ ಮಹೋತ್ಸವದ ಸಾನಿಧ್ಯ ವಹಿಸಿ, ದ್ವಿತೀಯ ಅಧ್ಯಾಯದಲ್ಲಿ ಕೃಷ್ಣ ನಮಗೆ ಎಚ್ಚರಿಕೆ ಮತ್ತು ಭರವಸೆಯನ್ನು ತಿಳಿಸಿದ್ದಾನೆ . ಅಸತ್ಯವಾದ , ಅಶಾಸ್ತ್ರೀಯಾವಾದ ಕರ್ಮಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ ಮತ್ತು ಸತ್ಕರ್ಮಕ್ಕೆ ದೇವರು ಯೋಗ್ಯವಾದ ಉತ್ತಮ ಫಲವನ್ನು ಕೊಡುವ ಬಗ್ಗೆ ಭರವಸೆ ನೀಡಿದ್ದಾನೆ. ಮುಂದುವರೆದು ನಿಷ್ಕಾಮ ಫಲದಿಂದ ಅನಂತ ಆನಂದ ವಾದ ಮೋಕ್ಷ ಪ್ರಾಪ್ತಿಯಾಗುವ ಸಂದೇಶವನ್ನೇ ಭಗವದ್ಗೀತೆ ಪ್ರಮುಖವಾಗಿ ತಿಳಿಸುತ್ತದೆಂದು ಹೇಳಿದರು.
ಪ್ರವಚನಕಾರರಾದ ಪಂ . ಪೂರ್ಣಪ್ರಜ್ಞಾಚಾರ್ ಮಳಗಿಯವರಿಂದ ಭಗವದ್ಗೀತಾ ಅಭಿಯಾನದಡಿ ದ್ವಿತೀಯ ಅಧ್ಯಾಯದ ಸಾರೋದ್ಧಾರ ಪ್ರವಚನ ನಡೆಯಿತು. ಆರಂಭದಲ್ಲಿ ಅವಧಾನಿಯವರು ಸ್ವಾಗತಿಸಿದರು. ು ಪಂ . ರಮೇಶಾಚಾರ್ ಹಿಪ್ಪರಗಿ ಉಪಸ್ಥಿತರಿದ್ದರು.