ನಿಷೇಧದ ಮಧ್ಯೆ ಯಮನೂರುಪ್ಪ ಅದ್ದೂರಿ ಉರುಸು

ಸಿಂಧನೂರು.ಏ.೨-ಕೋವಿಡ್ ೧೯ ೨ನೇ ಅಲೆ ತಡೆಯಲು ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಯಮನೂರುಪ್ಪ ಉರುಸು ರದ್ದು ಮಾಡಿದ್ದು ತಾಲೂಕಾಡಳಿತ ಆದೇಶ ಉಲ್ಲಂಘನೆ ಮಾಡಿ ಯಮನೂರಪ್ಪ ಉರುಸು ಆದ್ದೂರಾಗಿ ಜರಗಿತ್ತು.
ನಗರದ ಹಿರೇ ಹಳ್ಳದ ಹತ್ತಿರವಿರುವ ಯಮನೂರಪ್ಪ ಧರಗದಲ್ಲಿ ಉರುಸು ನಡೆಸದಂತೆ ತಾಲೂಕಾಡಳಿತ ನಿಷೇದಮಾಡಿದ್ದರು.
ಸಹ ಆದೇಶವನ್ನು ಉಲ್ಲಂಘಿಸಿ ಯಮನೂರುಪ್ಪ ಉರುಸು ಇಂದು ಜರಗಿತ್ತು ಎಲ್ಲಿ ನೋಡಿದಲ್ಲಿ ಜನ ? ಜಂಗೋಳಿ ಕಂಡು ಬಂತು ಮಾಸ್ಕ್ ಧರಿಸದೆ ಸಮಾಜಿಕ ಅಂತರ ಕಾಪಡದೆ ಜನ ಜೊತೆ ಜೊತೆಯಲ್ಲಿ ಅಂಟಿಕೊಂಡು ತಿರುಗಾಡುತ್ತಿದ್ದು ಉರುಸುನಲ್ಲಿ ಅಂಗಡಿ ಮುಗಟ್ಟುಗಳನ್ನು ಹಾಕಿ ವ್ಯಾಪರಸ್ತರು ವ್ಯಾಪರ ಮಾಡಿ ತೋಡಗಿದರು.
ಉರುಸಿಗೆ ಬಂದ ಭಕ್ತರು ಯಮನೂರುಪ್ಪ ಧರಗಗೆ ತಂಗಿನಕಾಯಿ ಹೋಡೆದು ಸಕ್ಕರೆ ಅರ್ಪಿಸಿ ಕೈಗೆ ಬೇಡಿ ಹಾಗೂ ಹೂವಿನ ಹಾರ ಕಟ್ಟಿಕೊಂಡು ದೇವರಿಗೆ ಭಕ್ತಿ ಅರ್ಪಿಸಿ ತಮಗೆ ಬೇಕಾದ ಸಮಾನುಗಳ ಖರೀದಿಯಲ್ಲಿ ಜನ ಬೀಸಿಯಾಗಿದ್ದು ಕಂಡು ಬಂತು ೩-೪ ಜನ ಬಂದೊಬಸ್ತಗೆ ಇದ್ದು ಪೋಲಿಸರು ಮುಖ್ಯಪ್ರೇಕ್ಷರಾಗಿ ನಿಂತುಕೊಂಡಿದ್ದರು .
ಕರೋನ ೨ ನೇ ಅಲೆ ಜನರಿಗೆ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಸರ್ಕರ ಜಾತ್ರೆ ? ಉರುಸು ಮೇರವಣಿಗೆ. ಪ್ರತಿಭಟನೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಆದೇಶ ಉಲ್ಲಂಘಿಸದವರ ಮೇಲೆ ಕಾನೂನ ಕ್ರಮ ಜರಗಿಸಲು ಜಿಲ್ಲಾಡಳಿತ. ತಾಲೂಕಾಡಳಿತಕ್ಕೆ ಖಡಕ್ ಆದೇಶ ಮಾಡಿದೆ.
ಸರ್ಕಾರ ತಾಲೂಕಾಡಳಿತ ಆದೇಶ ಉಲ್ಲಂಘಿಸಿ ಆಯೋಜಕರು ಉರುಸು ನೆಡಸುತ್ತಿದ್ದು ಉರುಸುನಲ್ಲಿ ಎಲ್ಲಿ ನೋಡಿದರಲ್ಲಿ ಜನ-ಜಂಗುಳಿ ಕಂಡು ಬಂತು ಮಾಸ್ಕ್ ಸಾಮಾಜಿಕ ಅಂತರ ಮಾಯವಾಗಿ ಜನ ಅಂಟಿಕೊಂಡು ತೀರುಗಾಡುತ್ತಿದ ದೃಶ್ಯ ಕಂಡು ಬಂತು.
ಮಕ್ಕಳು ಮರಿಗಳೊಂದಿಗೆ ಮಹಿಳೆಯರು, ವೃದ್ಧರು ಉರುಸಿಗೆ ಬಂದ್ದಿದ್ದು ಏನಾದರು ಹೆಚ್ಚು ಕಡಿಮೆಯಾದರೆ ಯಾರು ಹೊಣೆಗಾರರು ತಾಲೂಕಾಡಳಿತ, ಪೋಲಿಸರು ಕರೋನ ತಡೆಗಟ್ಟಿ ನಮ್ಮ ಆರೋಗ್ಯ ಸಲುವಾಗಿ ಹೋರಾಡುತ್ತಿದ್ದಾರೆಂಬ ಕನಿಷ್ಠ ಜ್ಞಾನ ಉರುಸು ಆಯೋಜಕರಿಗೆ ಇಲ್ಲ ಜನರಿಗೆಂತ್ತು ಮೋದಲೆಯಿಲ್ಲ ಕರೋನ ಬಂದ ಮೇಲೆ ನೋಡಿದರಾಯಿತು ಎನ್ನುವ ಮನೋಭಾವನೆ ಜನರಲ್ಲಿ ಬಂದು ಉರುಸಿನಲ್ಲಿ ಬೇಕಾಬಿಟ್ಟಿಯಾಗಿ ಹೋರಡುತ್ತಿದ್ದರೆ.
೩-೪ ಜನ ಇರುವ ಪೋಲಿಸರು ಉರುಸಿಗೆ ಬಂದ ಜನರನ್ನು ನಿಯಂತ್ರಿಸುವ ಜೋತೆಗೆ ಟ್ರಾಪೀಕ್ ಜಾಮ್ ನಿಯಂತ್ರಿಸಲು ಹರಸಹಾಸ ಪಡುತ್ತಿದ್ದು ಎಲ್ಲಮ್ಮ ದೇವಸ್ಥಾನದ ಮುಂದೆ ಟ್ರಾಪೀಕ್ ಜಾಮ್‌ಯಾಗಿ ವಾಹನ ಸವಾರರು ಪರದಾಡತೊಡಗಿದ್ದರು.