ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ದಸರಾ ಬನ್ನಿ ಮಹೋತ್ಸವ

  • ಒಮ್ಮೆಲೇ ಬಂದ ಸಾವಿರಾರು ಜನರು
  • ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ
  • ಈ ವರ್ಷವೂ 40 ಕ್ಕೂ ಹೆಚ್ಚು ಜನರಿಗೆ ಗಾಯ
  • ಮಲ್ಲಯ್ಯನ ಕಾರಣಿಕ ಸುಗಮ

ಎನ್,ವೀರಭದ್ರಗೌಡ.
ಬಳ್ಳಾರಿ ಅ 27: ಕೊರೋನಾ ವ್ಯಾಪಿಸುತ್ತದೆಂಬ ಕಾರಣದ ಹಿನ್ನಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಇಲ್ಲಿಗೆ ಸಮೀಪದ ಹೊಳಗುಂದ ಮಂಡಲದ ನೇರಣಕಿಯ ದೇವರಗುಡ್ಡದ ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕದ ದಸರಾ ಮಹೋತ್ಸವ ನಿಷೇಧ ಮಾಡಿತ್ತು. ಆದರೂ ಜನರು ಗುಡ್ಡಕ್ಕೆ ರಾತ್ರಿ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬಂದು ಪ್ರತಿವರ್ಷದಂತೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿ, ಮಲ್ಲಯ್ಯನ ಕಾರಣಿಕ ಕಾರ್ಯವನ್ನು ಸುಗಮವಾಗಿ ನಡೆಸಿಕೊಡಲಾಯಿತು. ದೇವರ ಪಲ್ಲಕ್ಕಿ ಕೊಂಡೊಯ್ಯುವ ಸಂದರ್ಭದಲ್ಲಿ ನಡೆದ ಬಡಿಗಿ ಆಟದಲ್ಲಿ ಈ ವರ್ಷವೂ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ದೇವರಗುಡ್ಡದ ಬನ್ನಿ ಉತ್ಸವ ಎಂದು ಸ್ಥಗಿತಗೊಂಡಿಲ್ಲ. ದೇವರ ಪಲ್ಲಕ್ಕಿಯನ್ನು ದೇವಸ್ಥಾನದಿಂದ ರಾಕ್ಷಸಪಡೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನಡೆಯುವ ಬಡಿಗೆ ಆಟದ ಸಂದರ್ಭದಲ್ಲಿ ಜನರು ಗಾಯಗೊಳ್ಳುತ್ತಾರೆ. ಅನೇಕ ಭಾರಿ ಹಲವರು ಜೀವ ಕಳೆದುಕೊಂಡಿದ್ದಾರೆಂದು. ಇದನ್ನು ಸ್ಥಗಿತಗೊಳಿಸುವಂತೆ ಈ ಹಿಂದೆ ಎನ್‍ಟಿಆರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಿಲ್ಲಿಸಲು ಆದೇಶಿಸಿ. ಬಿಗಿ ಪೊಲೀಸ್ ಬಂದೋ ಬಸ್ತು ಒದಗಿಸಿದ್ದರು. ಆದರೂ ಆಗಿರಲ್ಲಿ. ಅಂದು ಸಹ ರಾತ್ರಿ ಏಕಾ ಏಕಿ ಸುತ್ತಮುತ್ತಲಿನ ಸಾವಿರಾರು ಜನತೆ ಗುಡ್ಡಕ್ಕೆ ಬಂದು ಆಚರಣೆ ಮಾಡಿದ್ದರು.
ತದ ನಂತರ ಈ ವರ್ಷ ಸಹ ಇದನ್ನು ಆಚರಿಸಬಾರದೆಂದು ಆಂದ್ರ ಪ್ರದೇಶ ಸರ್ಕಾರ ಈ ಮೊದಲೇ ಮಾಧ್ಯಮಗಳಲ್ಲಿ ನಿಷೇಧದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿತ್ತು. ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತು ಒದಗಿಸಿತ್ತು. ದೇವರಗುಡ್ಡಕ್ಕೆ ಬರುವ ರಸ್ತೆಗಳೆಲ್ಲವನ್ನು ಬಂದ್ ಮಾಡಿತ್ತು.
ಆದರೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕಾಲುದಾರಿಗಳಲ್ಲಿ ನಿನ್ನೆ ರಾತ್ರಿ ಯಾಗುತ್ತಿದ್ದಂತೆ. ಗುಡ್ಡಕ್ಕೆ ಬಂದರು. ಅಲ್ಲಿದ್ದ ನೂರಾರು ಪೊಲೀಸರು ಇದನ್ನು ಕಂಡು ಮೌನವಹಿಸಿದರು. ಪೊಲೀಸರ ಅಡ್ಡಿ ಪಡಿಸಿದರೆ ಗಲಾಟೆಗಳಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಮೌನವಹಿಸಲು ಸ್ಥಳೀಯ ರಾಜಕೀಯ ಬೆಂಬಲವೂ ಇರಬೇಕು ಎನಿಸುತ್ತೆ.

ಅಂತೂ ಪ್ರತಿ ವರ್ಷದಂತೆ ದೇವರಗುಡ್ಡದ ಮಾಳ ಮಲ್ಲೇಶ್ವರ ಸ್ವಾಮಿಯ ಕಾರಣಿಕದ ದಸರಾ ಮಹೋತ್ಸವ ಪ್ರತಿ ವರ್ಷದಂತೆ ಸಾವಿರಾರು ಜನರ ಮಧ್ಯೆ ನಡೆಯಿತು.
ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊರಗೆ ತರಲಾಯಿತು. ಸಧ್ಯ ಅರಕೆರೆ ಗ್ರಾಮಸ್ಥರ ಸುಪರ್ದಿಯಲ್ಲಿರುವ ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ ಬೇಕೆಂದು ಅರಕೇರ ಎಳ್ಳಾರ್ಥಿ ಮೊದಲಾದ ಗ್ರಾಮಸ್ಥರು ಬಂಡಾರ ಎರಚುತ್ತ, ಇಲಾಲು ಆಡಿಸುತ್ತ, ಬಡಿಗೆಗಳ ಮೂಲಕ ಅರಕೆರೆ ಗ್ರಾಮದವರನ್ನು ಬೆದರಿಸುವ ಕಾರ್ಯ ಬಡಿಗೆಗಳಿಂದ ನಡೆಯಿತು. ಈ ಸಂದರ್ಭದಲ್ಲಿ ಈ ವರ್ಷ ವೂ 40 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಇದನ್ನು ಇಲ್ಲಿನ ಜನತೆ ಒಂದು ರೀತಿ ದೇವರ ಸೇವೆ ಎಂದೇ ಭಾವಿಸುತ್ತಾರೆ.
ದೇವರ ಮೂರ್ತಿ ಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ.

ಮಲ್ಲಯ್ಯನ ಕಾರಣಿಕ:
ಬಳಿರೇ…”ಗಂಗೆ ಹೊಳೆದಂಡಿಗೆ ನಿಂತಾಳ, ಮಾಳಮ್ಮವ್ವ ಸವಾರಿ ಮಾಡ್ಯಾಳ, ಮುಂದಿನ ಆರು ತಿಂಗಳ ವರೆಗೆ 4800 ನಗ ಹಳ್ಳಿ, 1600 ಜೋಳ, ಮೂರು ಆರು, ಆರು ಮೂರಾದೀತು” ಎಂದು ಮಲ್ಲಯ್ಯನ ಕಾರಣಿಕ ಆಗಿದೆ.
ಆಂದ್ರ ಪ್ರದೇಶವಾದರೂ ಮಲ್ಲಯ್ಯನ ಕಾರಣಿಕ ಮಾತ್ರ ಕನ್ನಡ ಭಾಷೆಯಲ್ಲೇ ಇರುತ್ತದೆ. ಕನ್ನಡ ನಾಡಿನ ಜನರು ಸಹ ಈ ಹೇಳಿಕೆಯನ್ನ ಅನುಸರಿಸುತ್ತಾರೆ.
ಈ ಕಾರಣಿಕದ ಮೇಲೆ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು, ರೈತರು ತಮ್ಮ ಬೆಳೆಯನ್ನು ಸಂಗ್ರಹಿಸಿ ಇಡುವುದು, ಇಲ್ಲವೇ ಮಾರಾಟ ಮಾಡುವದನ್ನು ನಿರ್ಧರಿಸುತ್ತಾರೆ.