ಸಂಜೆವಾಣಿ ವಾರ್ತೆ
ಸಿರಿಗೇರಿ ಜು 30. ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಸಂಭ್ರಮದೊಂದಿಗೆ ಆಚರಿಸುವ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವೂ ಪ್ರಮುಖ ಸ್ಥಾನವನ್ನು ಪಡೆದಿದೆ. ಹಿಂದೂ ಮುಸ್ಲಿಂ ಹಾಗೂ ಇತರೆ ಜನರು ಕೂಡಿಕೊಂಡು ಸಂಭ್ರಮದಿಂದ ಕುಣಿಯತ ನಲಿಯುತ ಶ್ರದ್ಧೆ ಭಕ್ತಿಯನ್ನು ಸಮರ್ಪಿಸುವ ಸಂಕೇತವಾಗಿ ನಿನ್ನೆ ಮೊಹರಂ ಹಬ್ಬದ ಕಡೆ ದಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದೊಂದಿಗೆ ಕೊನೆಗೊಂಡಿತು. ಸಿರಿಗೇರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಸಿರಿಗೇರಿ, ಕರೂರು, ತಾಳೂರು, ಕೂರಿಗೆನೂರು ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧವಿತ್ತು. ನಿಷೇಧದ ಮಧ್ಯೆಯು ಜಿಲ್ಲಾಧಿಕಾರಿಗಳು ಹೊರಡಿಸಿದ ಹಬ್ಬ ಆಚರಣೆಯ ಕೆಲವು ನಿಯಮಾನಸಾರವಾಗಿ ಮೊಹರಂ ಹಬ್ಬ ಆಚರಣೆಗೊಂಡಿತು. ಸ್ಥಳೀಯ 5 ಮಸೀದಿಗಳಲ್ಲಿ ಪೀರಲ ದೇವರುಗಳನ್ನು ಕೂಡಿಸಲಾಗಿತ್ತು. ನಿನ್ನೆ ಮೊಹರಂ ಕಡೆಯ ದಿನವನ್ನು ಪೀರಲ ದೇವರುಗಳ ಮೆರವಣಿಗೆ ಮಾಡಿ ಕಳಿಸಿಕೊಡುವ ಸಂಪ್ರದಾಯದಲ್ಲಿ, ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ತಮ್ಮ ತಮ್ಮ ಕೋಮಿನವರ ಜವಾಬ್ದಾರಿ ತೆಗೆದುಕೊಂಡು ಯಾವುದೇ ಸಣ್ಣಪುಟ್ಟ ಗಲಾಟೆಗಳಿಗೆ ಅವಕಾಶ ನೀಡದಂತೆ ಮೊಹರಂ ಹಬ್ಬ ವಿಜೃಂಭಣೆಯಿಂದ ಆಚರಣೆಯಾಗುವಂತೆ ನೋಡಿಕೊಂಡಿದ್ದು ವಿಶೇಷವಾಗಿತ್ತು. ಹಬ್ಬದಲ್ಲಿ ಮಧ್ಯ ಮಾರಾಟದ ನಿಷೇಧ ಮಾಡಿದ್ದು, ದೇವರುಗಳನ್ನು ಬೇಗನೆ ಕಳಿಸಿಕೊಡಲು ವ್ಯವಸ್ಥೆ ಮಾಡಿದ್ದು, ಹಬ್ಬದ ಆಚರಣೆಗೆ ನಿಯಮಾವಳಿಗಳನ್ನು ಜಾರಿ ಮಾಡಿದ್ದು ಮೊಹರಂ ಹಬ್ಬವು ವಿಜೃಂಭಣೆಯ ಯಶಸ್ವಿಗೆ ಕಾರಣವಾಗಿತ್ತು ಎಂದು ಹೇಳಬಹುದು.
One attachment • Scanned by Gmail