ನಿಷೇಧದ ನಡುವೆಯೂ ಪಟಾಕಿ ಮಾರಾಟ

ಸಂಡೂರು, ನ.15 : ಸಾಮಾಜಿಕ ಅಂತರಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಪಟಾಕಿಯನ್ನು ಸಿಡಿಸದೇ ಸರಳವಾಗಿ ಹಬ್ಬ ಆಚರಿಸಿ ಪಟಾಕಿ ನಿಷೇದವಿದ್ದರೂ ಯಶವಂತ ವಿಹಾರ ಕ್ಲಬ್ ನ ಮೈದಾನದಲ್ಲಿ ಬಾಣಗಳ ಸುರಿಮಳೆಯ ಮಳಿಗೆಗಳು ಉದ್ಭವಿಸಿದ್ದು ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದ್ದು ನಿಷೇಧದ ನಡುವೆಯೂ ಈ ಬಿಕ್ಕಟ್ಟು ಪರಿಣಮಿಸಿದೆ.
‌ಸಂಡೂರಿನಲ್ಲಿ ದೀಪಾವಳಿ ಸಂಭ್ರಮ ಕಂಡುಬರುತ್ತದೆ. ದೀಪಾವಳಿ ಎಂದರೆ ಬೆಳಕನ್ನ ಚೆಲ್ಲುವ ಹಬ್ಬ ಎಂದರ್ಥ ಅಜ್ಞಾನ ಮಾರ್ಗದಿಂದ ಸುಜ್ಞಾನ ಮಾರ್ಗಕ್ಕೆ ಸಾಗಿ ಜ್ಞಾನ ಮಾರ್ಗದತ್ತ ಸಾಗುವ ಸಂದೇಶವೆ ದೀಪಾವಳಿ ಹಬ್ಬದ ವಿಶೇಷ ನಾಡಹಬ್ಬವನ್ನು ಪರಸ್ಪರ ಬನ್ನಿಯನ್ನ ವಿನಿಮಯ ಮಾಡುವುದರ ಮೂಲಕ ಹಂಚಿಕೊಂಡರೆ ವ್ಯಾಪಾರಸ್ಥರು ವರ್ಷದುದ್ದಕ್ಕೂ ಗ್ರಾಹಕರ ಜೊತೆ ಸಂಬಂಧ ಬೆಳೆಸಿಕೊಂಡು ತಮ್ಮ ವಹಿವಾಟುಗಳನ್ನು ನಡೆಸಿಕೊಂಡು ಬಂದು ಕಾಯಕದ ಜೊತೆ ಪ್ರಸಾದ ಹಂಚಿಕೊಳ್ಳುವ ಭಾವನೆಯಿಂದ ಲಕ್ಷ್ಮೀಪೂಜೆ ಮಾಡುವುದರ ಜೊತೆಗೆ ಗ್ರಾಹಕರ ಸಂಬಂಧವನ್ನು ಬೆಳೆಸಿಕೊಳ್ಳುವುದು ವಾಡಿಕೆಯಾಗಿದೆ. ಗ್ರಾಹಕರ ಮತ್ತು ಮಾಲೀಕರ ಸಂಬಂಧ ಗಟ್ಟಿಯಾಗರಬೇಕು ಎನ್ನುವುದೇ ಈ ಹಬ್ಬದ ಮೂಲ ಉದ್ದೇಶ ಮನೆಯ ಕುಟುಂಬ ಮಕ್ಕಳ ಜೊತೆ ಸಂಭ್ರಮದಿಂದಗ ಉಲ್ಲಾಸದಿಂದ ದೀಪಾವಳಿಯ ಹಬ್ಬವನ್ನು ಆಚರಿಸುವುದನ್ನು ನೀವು ಗಮನಿಸಬಹುದಾಗಿದೆ.
ಹಿಂದಿನ ಕಾಲದ ವ್ಯಾಪಾರಸ್ಥರಿಗೂ ಈಗಿನ ಕಾಲದ ವ್ಯಾಪಾರಸ್ಥರಿಗೂ ಅಜಗಜಾಂತರ ವ್ಯಾತ್ಯಾಸವಿದ್ದು ಹಿಂದಿನ ಕಾಲದ ವ್ಯಾಪಾರಸ್ಥರೂ ಸ್ನೇಹಜೀವಿಗಳು ಜನಪ್ರಿಯತೆ ಹೊಂದಿದವರು ಆಗಿದ್ದು ಬಸವತತ್ವ ಸಿದ್ಧಾಂತವನ್ನು ಅನುಸರಿಸಿ ಅಕ್ಕ, ಅಣ್ಣ, ಅಪ್ಪ, ಮಾವ, ಎನ್ನುವ ಪದಗಳಿಂದ ಗ್ರಾಹಕರನ್ನು ಸಂಘಟಿಸಿ ತಮ್ಮ ವಹಿವಾಟುಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ದಿ. ಗೊಗ್ಗ ಚನ್ನಯ್ಯನವರು ಬಾಗೋಡಿ ವೀರಬಸಪ್ಪನವರು, ಬಂಡೇಮೇಗಳ ಬಸಪ್ಪರವರು ಅರಳಿ ರುದ್ರಪ್ಪನವರು, ಪಾಢ್ಯದ ನಿಮಿತ್ತ ಮಾಜಿ ಲೋಕಸಭಾ ಸದಸ್ಯ ಕೆ.ಎಸ್.ವೀರಭದ್ರಪ್ಪನವರ ಕಾಲದ ಹಬ್ಬದ ವಾತಾವರಣ ಈಗ ಮಾಯವಾಗಿ ಹೋಗಿದೆ. ಈಗಿನ ಕಾಲದ ವ್ಯಾಪಾಸ್ಥರು ಕೋವಿಡ್-19 ಮಾಹಾಮಾರಿ ರೋಗಕ್ಕೆ ಹೆದರಿ ಸರಳವಾಗಿ ಹಬ್ಬವನ್ನು ಆಚರಿಸುತ್ತಾರೆ.