ನಿಶ್ಚಿತಾರ್ಥ ರದ್ದು: ಯುವತಿ ಆತ್ಮಹತ್ಯೆ

ಕುಂದಾಪುರ, ನ.೧೦- ನಿಶ್ಚಿತಾರ್ಥ ರದ್ದುಗೊಂಡ ಕಾರಣ 26 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಡ್ಡೆಯಂಗಡಿಯಲ್ಲಿ ನಡೆದಿದೆ.

ಮೃತರನ್ನು ಗುಡ್ಡೆಯಂಗಡಿ ನಿವಾಸಿ ಮುರಳೀಧರ್‌ ನಾಯಕ್‌‌ ಅವರ ಪುತ್ರಿ ಸ್ಪೂರ್ತಿ ಎಂ ನಾಯಕ್‌ ಎಂದು ಗುರುತಿಸಲಾಗಿದೆ. ಸ್ಪೂರ್ತಿ ಅವರಿಗೆ ಆ.16ರಂದು ವಿವಾಹ ನಿಶ್ವಿತಾರ್ಥ ನಿಶ್ಚಯವಾಗಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ ನಿಂತುಹೋಗಿತ್ತು. ಇದರಿಂದ ಬೇಸತ್ತ ಸ್ಪೂರ್ತಿ ನ.6 ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಸ್ಪೂರ್ತಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ, ನ.7ರ ತಡರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.