ನಿಶ್ಚಿತಾರ್ಥ ಮುರಿಯಲು ಯತ್ನಿಸಿದ ಕಿರಾತಕರಿಂದ ಮಗನ ಬರ್ಬರ ಕೊಲೆ ತಾಯಿ ಸ್ಥಿತಿ ಚಿಂತಾಜನಕ

ಕಲಬುರಗಿ :ಜೂ.05:ಸಂಬಂಧ ಮುರಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ನಡೆದ ಜಗಳದ ಕಾರಣಕ್ಕೆ ದುಷ್ಕರ್ಮಿಗಳು ಗುಂಪೆÇಂದು ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಬಳಿಯಲ್ಲಿ ಶನಿವಾರ ನಡೆದಿದೆ.
ನಿಖಿಲ ರಾಜು ಕನೇಗಾರ (22) ಕೊಲೆಯಾಗಿರುವ ಯುವಕ. ಈತ ಕರುಣೇಶ್ವರ ನಗರದ ನಿವಾಸಿಯಾಗಿದ್ದ. ಈತ ತಾಯಿ ಕಮಲಾ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ನಿಖಿಲ್ ಸಹೋದರ ವಿಕಾಸ ಸೇರಿದಂತೆ ಒಟ್ಟು ಮೂವರು ಗಾಯಗೊಂಡಿದ್ದಾರೆ. ಎಲ್ಲರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಮಲಮ್ಮ ತರಕಾರಿ ಮಾರಾಟ ಮಾಡಿಕೊಂಡಿದ್ದರೆ, ಅವರ ಪತಿ ರಾಜು ರಾಮ ಮಂದಿರ ಸಮೀಪದ ಕಾಲೇಜೊಂದರಲ್ಲಿ ಅಡುಗೆ ತಯಾರಕಾಗಿ ಕೆಲಸ ಮಾಡುತ್ತಿದ್ದಾರೆ. ಮೂರು ಮಕ್ಕಳೊಂದಿಗೆ ಕರುಣೇಶ್ವರ ನಗರದಲ್ಲಿ ವಾಸವಾಗಿದ್ದರು. ಕೊಲೆಯಾಗಿರುವ ನಿಖಿಲ್ ಭಜಿ ಬಂಡಿ ಇಟ್ಟುಕೊಂಡಿದ್ದ.
ನಿಖಿಲನ ಸಹೋದರಿಯ ಮದುವೆಯು ಮುಂಬಯಿನಲ್ಲಿರುವ ವ್ಯಕ್ತಿಯ ಜತೆಗೆ ನಿಗದಿಪಡಿಸಲಾಗಿತ್ತು. ಸೋಮವಾರ ಸರಳವಾಗಿ ನಿಶ್ಚಿತಾರ್ಥ ನಡೆಸಲು ತಯಾರಿ ನಡೆದಿತ್ತು. ಇದನ್ನು ಅರಿತ ಸ್ಟೇಷನ್ ಬಜಾರ ಪ್ರದೇಶ ಯುವಕರಿಬ್ಬರು ಸೇರಿಕೊಂಡು ಸಂಬಂಧ ಮುರಿಯಲು ಕುತಂತ್ರ ಮಾಡಿ, ಯುವಕನಿಗೆ ಕರೆ ಮಾಡಿ ಇಲ್ಲದ್ದನ್ನು ಹೇಳಿದ್ದರು. ಆ ಯುವಕ ಮರಳಿ ಯುವತಿ ಮನೆಯವರಿಗೆ ತಿಳಿಸಿದ್ದ. ಅಲ್ಲದೆ ಆ ಸಂಖ್ಯೆಗಳನ್ನು ನೀಡಿದ್ದರು.
ಆ ಸಂಖ್ಯೆಗೆ ಶನಿವಾರ ಕರೆ ಮಾಡಿದಾಗ ವಾಗ್ವಾದ ಆಗಿತ್ತು. ಅಲ್ಲದೆ ರಾಮ ಮಂದಿರ ಬಳಿ ಇz್ದÉೀವೆ ಬಾ ಎಂದು ಕರೆದಿದ್ದರು. ಅಲ್ಲಿಗೆ ಹೋದಾಗ ವಾಜಪೇಯಿ ಲೇಲೇಔಟ್ ಹತ್ತಿರವಿz್ದÉೀವೆ ಬರಲು ಸವಾಲು ಹಾಕಿದರು. ನಿಖಿಲ ಹಾಗೂ ಮನೆಯವರು ಹೋಗಿದ್ದರು. ಇಲ್ಲದ್ದು ಹೇಳಿ ಹೀಗೆ ಮಾಡಬೇಡಿ ಎಂದು ತಿಳಿ ಹೇಳಿದರು. ಕೇಳದೆ ವಾಗ್ವಾದಕ್ಕಿಳಿದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಇದರಿಂದ ಕುಪಿತಗೊಂಡ ನಿಖಿಲ್, ಉದಯನಿಗೆ ಹೊಡೆದಿದ್ದಾರೆ. ಆಗ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳೆಲ್ಲರು ಸೇರಿಕೊಂಡು ನಡೆಸಿದ ದಾಳಿಯಲ್ಲಿ ಗಂಭೀರ ಗಾಯಗೊಂಡು ನಿಖಲ್ ಕೊನೆಯುಸಿರೆಳೆದಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ಅರಿಯುತ್ತಲೇ ಸ್ಥಳಕ್ಕೆ ಡಿಸಿಪಿ ಕಿಶೋರಬಾಬು, ಎಸಿಪಿ ಜೆ.ಎಚ್.ಇನಾಮದಾರ, ಇನ್‍ಸ್ಪೆಕ್ಟರ್ ಶಿವಾನಂದ ಗಾಣಿಗೇರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆದಿದೆ. ಕೊಲೆ ಆರೋಪಿತರ ಪತ್ತೆಗೆ ಜಾಲ ಬೀಸಲಾಗಿದೆ.