`ನಿಶಾಚರ’ ನಿಜಕ್ಕೂ ವಿಶೇಷ

“ನಿಶಾಚರ” ನಿಜಕ್ಕೂ ವಿಶೇಷ ಚಿತ್ರ ಎನಿಸಿದೆ. ಕಾರಣ ಇಷ್ಟೇ  ನಿರ್ದೇಶನ ಮಾಡಿರುವ ಎಸ್.ಭಾಸ್ಕರ್‌ ವಿಶೇಷ ಚೇತನ. ಅಡ್ವೆಂಚರ್ ಮತ್ತು ಥ್ರಿಲ್ಲಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಭಾಸ್ಕರ್.ಜಿ , ಎರಡು ದಾರಿಯಲ್ಲಿ ನಡೆಯುವ ಕಥೆ  ಚಿತ್ರದಲ್ಲಿ ಸಾಗಲಿದೆ. ಮೊದಲನೆಯದರಲ್ಲಿ ಪ್ರೀತಿ ತಪ್ಪಾ, ಪ್ರೀತ್ಸೋದು ತಪ್ಪಾ. ಯಾವಾಗಲೂ ಗೊಂದಲ.ಪ್ರೀತಿನೂ ತಪ್ಪಲ್ಲ, ಪ್ರೀತ್ಸೋದು ತಪ್ಪಲ್ಲ. ಆದರೆ ಪ್ರೀತಿ ಮಾಡೋ ವ್ಯಕ್ತಿ ತಪ್ಪಿದ್ರೆ ಪ್ರೀತಿ ಎಂಬ ಪರಿಕಲ್ಪನೆ ಬದಲಾವಣೆ ಆಗುತ್ತದೆ. ಎರಡನೆಯದರಲ್ಲಿ ಪೋಷಕರಿಗೆ ಸುಳ್ಳು ಹೇಳಿ, ವಿಷಯವನ್ನು ಮುಚ್ಚಿಟ್ಟು ದೂರದ ಸ್ಥಳಕ್ಕೆ ಹೋದಾಗ ಏನೆಲ್ಲಾ ಅವಘಡ ಸಂಭವಿಸುತ್ತದೆ ಎನ್ನುವ ವಿವರ ನೀಡಿದರು.

ಕಾರ್ಕಳ, ಉಡುಪಿ, ಮಧುಕಳ ಕಡೆಗಳಲ್ಲಿ 26 ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕ್ರೂಸನ್ನು ಬಳಸಿಕೊಂಡು ಸಮುದ್ರದ ಮಧ್ಯದಲ್ಲಿ ಎರಡು ಜೋಡಿಗಳ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ ಎಂದರು.

ಲತಾ.ಬಿ.ಆರ್. ನಿರ್ಮಾಪಕಿ. ಬೃಂದಾ, ನೇತ್ರಾವತಿ ಸಹ ನಿರ್ಮಾಪಕಿಯರು. ಅಕ್ಷಯ್‌ಕಾರ್ಕಳ ನಾಯಕ, ಸಸ್ವಿಕಪೂಜಾರಿ ನಾಯಕಿ. ಅಭಿಮನ್ಯು, ಡಾಲಿ, ಹೇಮಚಂದ್ರ, ಮೇಘ ಮುಂತಾದವರು ನಟಸಿದ್ದಾರೆ.  ಮೋಹನ್ ಸಂಗೀತ , ವಿ.ಮಂಜುನಾಥ್‌ಪಟೇಲ್ ಛಾಯಾಗ್ರಹಣವಿದೆ.