ನಿಶಬ್ದವಾದ ಕೊಟ್ಟೂರು

ಕೊಟ್ಟೂರು ಏ 24 : ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ಸಿಗದೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ನೈಟ್​ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಅದರಂತೆ ನಿನ್ನೆ (ಏಪ್ರಿಲ್ 23) ರಾತ್ರಿಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೊಂಡಿದ್ದು, ಸೋಮವಾರ (ಏಪ್ರಿಲ್ 26) ಮುಂಜಾನೆಯ ತನಕ ಚಾಲ್ತಿಯಲ್ಲಿರಲಿದೆ. ಈ ಕಾರಣದಿಂದಾಗಿ ಇಂದು (ಏಪ್ರಿಲ್ 24) ಮತ್ತು ನಾಳೆ (ಏಪ್ರಿಲ್ 25) ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಬಂದ್ ಆಗಿದೆ. ಬೆಳಗ್ಗೆ 6ರಿಂದ 10 ಗಂಟೆಯ ತನಕ ಮಾತ್ರ ನಿತ್ಯಬಳಕೆಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ.