ನಿವೇಶನ ಹಂಚಿಕೆ ಮಾಡದಿದ್ದರೆ ಧರಣಿ ಸತ್ಯಾಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಡಿ8 : ಆಶ್ರಯ ಯೋಜನೆಯ ನಿವೇಶನದ ಫಲಾನುಭವಿಗಳನ್ನು ಆಯ್ಕೆ ಮಾಡದಿರುವುದನ್ನು ಖಂಡಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಜಿಲ್ಲಾ ಅಧ್ಯಕ್ಷ ಬಸವರಾಜ ಹಿರೇಮನಿ ಹಾಗೂ ತಾಲೂಕ ಅಧ್ಯಕ್ಷ ಸುರೇಶ ಹಟ್ಟಿ ನೇತೃತ್ವದಲ್ಲಿ ಪಟ್ಟಣದ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.
ಸರಕಾರದ ಯೋಜನೆಯಾದ ಆಶ್ರಯ ನಿವೇಶನವನ್ನು ಸುಮಾರು 7 ವರ್ಷಗಳ ಹಿಂದೆಯೇ ಶಿಗ್ಲಿ ರೋಡನಲ್ಲಿ ಬಡವರಿಗೆ ಮನೆ ಕಟ್ಟಲು ಆಶ್ರಯ ನಿವೇಶನವನ್ನ ಭೂಮಿ ಖರೀದಿ ಹಿಡಿದಿದ್ದು ಇಲ್ಲಿಯವರೆಗೂ ಯಾವುದೇ ಶಾಸಕರು, ಜನಪ್ರತಿನಿದಿಗಳು ಅಧಿಕಾರಿಗಳು ಬಡಕುಟುಂಬದ ಫಲಾನುಭವಿಗಳನ್ನು ಆಯ್ಕೆ ಮಾಡದೇ ಅನ್ಯಾಯ ಮಾಡುತ್ತಿದ್ದಾರೆ. ಅರ್ಜಿ ಹಾಕಿದ ಅರ್ಹ ಬಡ ಫಲಾನುಭವಿಗಳನ್ನು ಸರ್ವೆ ಮೂಲಕ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಆಶ್ರಯ ಯೋಜನೆಯ ನಿವೇಶನವನ್ನು ಹಂಚಿಕೆ ಮಾಡಬೇಕು. ಪಟ್ಟಣದಲ್ಲಿ ಅನೇಕ ಕುಟುಂಬಗಳು ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತ ಕಷ್ಟದಿಂದ ಬಳಲುತ್ತಿದ್ದಾರೆ. ಆದಷ್ಟು ಬೇಗ .20 ದಿನದೊಳಗಾಗಿ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಮಾಡದೆ ಇದ್ದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ಅರ್ಜಿ ಹಾಕಿದ ಹಾಗೂ ಹಾಕದೆ ಇರುವ ಬಡಫಲಾನುಭವಿಗಳೊಂದಿಗೆ ಲಕ್ಷ್ಮೇಶ್ವರ ಪುರಸಭೆ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು.ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ದಾದಾಪೀರ ಸೊಲ್ಲಾಪುರ,ಗಣೇಶ ಹಾದಿಮನಿ,ಅಷ್ಪಾಕ ಬಾಗಲಕೋಟ,ಮಂಜುನಾಥ ಮುಳುಗುಂದ,ಮೈಲಾರಿ ಹೆಗ್ಗಣ್ಣನವರ,ಎನ್ ಎಚ ಹುರಕನವರ ಮಂಜುರ ಬಂಕಾಪುರ,ಮಹೇಶ ಸೂರಣಗಿ ನೂರಅಹ್ಮದ ಮಕಾನದಾರ ಮಂಜುನಾಥ ಗದ್ದಿ, ಮಲ್ಲೇಶ ಗೊಜಗೋಜಿ, ಕಾರ್ಯಕರ್ತರು ಇದ್ದರು.