
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಮಾ.12 ತಾಲೂಕಿನ ಮರಬ್ಬಿಹಾಳು ಗ್ರಾಮ ಪಂಚಾಯತಿಯ ಹಳ್ಳಿಗಳಲ್ಲಿರುವ ನಿವೇಶನ ರಹಿತರನ್ನು ನಿವೇಶನ ರಹಿತರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಕೂಡಲೇ ನಿವೇಶನ ರಹಿತರಿಗೆ ಜಾಗವನ್ನು ಹಂಚಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಮರಬ್ಬಿಹಾಳು ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನೆಡೆಸಲಾಯಿತು.ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ.ಗ್ರಾಕೂಸ ಸಂಚಾಲಕಿ ಎಂ ಬಿ ಕೊಟ್ರಮ್ಮ ಮಾತನಾಡಿ ಮರಬ್ಬಿಹಾಳು ಪಂಚಾಯತಿ ವ್ಯಾಪ್ತಿ ನಿವೇಶನ ರಹಿತರು 2017 ರಿಂದ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದು ಇಲ್ಲಿನ ಪಂಚಾಯತಿ ಸರ್ಕಾರಿ ಭೂಮಿಯನ್ನು ನಿವೇಶನ ಹಂಚಿಕೆ ಮಾಡಿದ್ದು ಬಿಟ್ಟರೆ ಇವರೆಗೂ ನಿವೇಶನ ಹಂಚಿಕೆ ಮಾಡದಿರುವುದನ್ನು ಖಂಡಿಸುತ್ತೇವೆ.ಇಲ್ಲಿನ ಪಿಡಿಒ ಸರ್ಕಾರದ ಕಛೇರಿಗೆ ಹೋಗಿ ಕೆಲಸ ಮಾಡಿಕೊಂಡು ಬರುವುದು ಬಿಟ್ಟು ನಮಗೆ ಮೇಲು ಅಧಿಕಾರಿಗಳಿಂದ ಆಧೇಶ ಬಂದಿಲ್ಲ.ಜಾಗಕ್ಕೆ ಮೂಲಭೂತ ಸೌಕರ್ಯ ಆಗುವುದಿಲ್ಲ ಎಂದು ಇಲ್ಲಸಲ್ಲದ ಸಬೂಬ್ ಹೇಳುವುದು ಸುಳ್ಳು ಭರವಸೆ ನೀಡುವುದು ಸರಿಯಲ್ಲ ಕೂಡಲೇ ನಿವೇಶನ ರಹಿತರಿಗೆ ನಿವೇಶನ ನೀಡಿ ಎಂದು ಆಗ್ರಹಿಸಿದರು.
ಗ್ರಾಕೂಸ ಜಿಲ್ಲಾ ಸಂಚಾಲಕ ಕೋಗಳಿ ಮಲ್ಲೇಶ್ ತಾಲೂಕ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮದಲ್ಲಿ ನಿವೇಶನ ರಹಿತರಿಗೆ ಸರ್ವೇ ನಂ 321/ಸಿ ಜಾಗವನ್ನು ನಿವೇಶನ ರಹಿತರಿಗೆ ನೀಡಲು ಜಿಲ್ಲಾಧಿಕಾರಿಗಳ ಹೇಳಿದ್ದರು. ಕಾರ್ಯಕ್ರಮವಾಗಿ ಹಲವು ತಿಂಗಳು ಕಳೆದರು ಇದುವರೆಗೂ ನಿವೇಶನ ಹಂಚಿಕೆಯಾಗಿಲ್ಲ ನಿವೇಶನ ರಹಿತರ ಪಟ್ಟಿಯಲ್ಲಿ ಬಹಳಷ್ಟು ಜನ ನಿವೇಶನ ರಹಿತರ ಹೆಸರು ಪಟ್ಟಿಯಲ್ಲಿ ಇಲ್ಲ ಕೂಡಲೇ ಮರಬ್ಬಿಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣ ದೇವರಕೆರೆ ,ಉಪನಾಯಕನಹಳ್ಳಿ, ವರದಾಪುರ,ಕೆಂಚಟ್ಟನಹಳ್ಳಿ ಹಾಗೂ ನಕ್ರಾಳ್ ತಾಂಡ ಸೇರಿದಂತೆ ಹಲವುಜನರಿಗೆ ನಿವೇಶನ ನೀಡಬೇಕು ಎಂದರು ಈ ಸಂದರ್ಭದಲ್ಲಿ ಬೆಣಕಲ್ಲು ತ್ರೀವೇಣಿ,ಲಲಿತಾ ಗದ್ದಿಕೇರಿ,ಹಾಗೂ ಗ್ರಾಮದ ರತ್ನಮ್ಮ ಸಿದ್ದಮ್ಮ ನಾಗರತ್ನ ಉಮಕ್ಕ ಶಾಂತಮ್ಮ ಗಂಗಮ್ಮ ದುರುಗಮ್ಮ,ಜಂಭಕ್ಕ,ಚಾಂದಭೀ ರೇಷ್ಮಾ,ಬಸಮ್ಮ,ಜಯಮ್ಮ ನೇತ್ರಾ ನಾಗಮ್ಮ,ನೇತ್ರಾವತಿ ಬಸವರಾಜ ಯಮನೂರಪ್ಪ ಶರಣಪ್ಪ ಇತರರು ಇದ್ದರು.