ನಿವೇಶನ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ವಿಜಯಪುರ,ನ.15-ಜಾಗದ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದಿದೆ.
ಮರಗು ಪಾಂಡ್ರೆ (55) ಕೊಲೆಯಾದವರು.
ಜಾಗದ ವಿಚಾರಕ್ಕೆ ಮರಗು ಪಾಂಡ್ರೆ ಮತ್ತು ಬೀರಪ್ಪ, ಮಾಳಪ್ಪ ಅವರೊಂದಿಗೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು. ಗಲಾಟೆ ತಾರಕಕ್ಕೆ ಏರಿ ಮರಗು ಪಾಂಡ್ರೆಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೊಲೆಗಾರರು ಪರಾರಿಯಾಗಿದ್ದು, ಈ ಸಂಬಂಧ ಬೀರಪ್ಪ, ಮಾಳಪ್ಪ ಸೇರಿದಂತೆ ಮತ್ತಿತರರ ವಿರುದ್ಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.