ಬೀದರ:ಮಾ.24:ನಗರದ ಗುಲ್ಲರ ಹವೇಲಿ ಸರ್ವೆ ನಂಬರ್ 57 ರಲ್ಲಿ ತೆರದ ನಿವೇಶನ ಸಂಖ್ಯೆ 31 ರಲ್ಲಿ ಭೂಮಿಯು ನಗರಾಭಿವೃದ್ಧಿ ಪ್ರಾಧಿಕಾರದಿಂದ ನೋಟಿಫಿಕೆಷನ್ ಹೊರಡಿಸಿ ಮಾರಾಟಕ್ಕೆ ಮುಂದಾಗಿರುವದನ್ನು ಪ್ರಶ್ನಿಸಿ ಕಲಬುರಗಿ ಹೈಕೊರಟ್ನಲ್ಲಿ ಸಲ್ಲಿಸಿರುವ ಅರ್ಜಿಯ ನ್ನು ಪರಿಗಣಿಸಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ನಿವೇಶನ ಮಾಲಿಕರು ಆದ ಹಕ್ಕುದಾರ ಸಿದ್ರಾಮಯ್ಯ ಸ್ವಾಮಿ ತಿಳಿಸಿದರು.
ಅವರು ಇಲ್ಲಿ ಗುರುವಾರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸದರಿ ಭೂಮಿಯನ್ನು ಕ್ರಷಿಯೆತರ ಭೂಮಿಯನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದು ಜಿಲ್ಲಾದಿಕಾರಿಗಳು ಅಗಸ್ಟ್ 1, 1973 ರಲ್ಲಿ ಆದೇಶ ಮಾಡಿರುತಾರೆ ಎಂದು ಮಾಹಿತಿ ನೀಡಿದರು.
ಸದರಿ ನಿವೇಶನ ದಿವಗಂತ ಸರದಾರ ಮನೋಹರ್ ಸಿಂಗ್ ತಂದೆ ಹರನಾಮ್ ಸಿಂಗ್ ಅವರಿಗೆ ಸೇರಿರುತದೆ,ಆದರೆ ಮರಣೋತ್ತರ ಮುಂಚೆ ನನ್ನಗೆ ಊಯಿಲು ಪತ್ರ ಬರೆದು ಕೊಟ್ಟಿರುತಾರೆ ಎಂದು ಹೇಳಿದರು.
ನನ್ನಗೆ ಸೇರಿರುವ ನಿವೇಶನ ಮಾರಾಟಕ್ಕಾಗಿ ನೋಟಿಫಿಕೆಷನ ಆಗಿರುವ ವಿಷಯ ಗಮನಕ್ಕೆ ಬಂದಾಗ , ಬೀದರ್ ನಗರಾಭಿವ್ರದ್ದಿ ಪ್ರಾಧಿಕಾರದ ಆಯುಕ್ತ ಹತ್ತಿರ ಸಂಬಂದಪಟ ದಾಖಲೆಗಳನ್ನು ತೆಗೆದುಕೊಂಡು ಹೋಗಿ ವಿಚಾರಿಸಿದ್ದಾಗ, ನೋಟಿಫಿಕೆಷನ ಜಾರಿ ಮಾಡಿದ ಬಳಿಕ ಯಾವ ಕಾರಣಕ್ಕು ಹೆಸರು ತೆಗೆಯಲು ಬರುವುದಿಲ್ಲ ಎಂದಿರುತ್ತಾರೆ.
ಐದು ಲಕ್ಷ ರೂ ನೀಡಿದರೆ ಅಧ್ಯಕ್ಷರ ಗಮನಕ್ಕೆ ತಂದು ಸರಿಪಡಿಸುವದಾಗಿ ಎಂದಿದ್ದಾರೆ.
ಈ ವಿಷಯವನ್ನಾಧರಿಸಿ ನನ್ನಗೆ ಆಗಿರುವ ಅನ್ಯಾಯದ ವಿರುದ್ದ ಹೈಕೋರ್ಟ್ ಮೋರೆಹೊದಾಗ ತಡೆಯಾಜ್ಞೆ ನೀಡಿದೆ ಎಂದರು.
ನನ್ನಗೆ ಸೇರಿದ ನಿವೇಶನ ಸಿ.ಎ.ಸೈಟ್ ಇರುವುದಿಲ್ಲ,ಆದರು ಸಹ ಪ್ರಾದಿಕಾರದ ಆಯುಕ್ತರು ಮತ್ತು ಅಧ್ಯಕ್ಷರು ನಿವೇಶನ ಮಾರಾಟಕ್ಕೆ ನೊಟಿಫಿಕೆಷನ್ ಪತ್ರಿಕೆಯಲ್ಲಿ ಹೊರಡಿಸುವದು ಅಕ್ಷಮ ಅಪರಾಧವಾಗಿದ್ದು,ಸದರಿ ವಿಷಯ ಕುರಿತು ಲೊಕಾಯುಕ್ತ ಪೆÇಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಪ್ರಾದಿಕಾರದ ಆಯುಕ್ತರು,ಅಧ್ಯಕ್ಷರು ಅಧಿಕಾರ ದೂರಪಯೊಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಆಸ್ತಿಯನ್ನು ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತಲ್ಲಿನರಾಗಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ ಅವರು ನಾನು ಬ್ಲಾಕ್ ಮೆಲ್ ಮಾಡುತ್ತಿನಿ ಎಂದು ಅವರು ನೀಡಿರುವ ಹೇಳಿಕೆಗೆ ಖಂಡಿಸುವೆ.
ಯಾರು ಬ್ಲಾಕ್ ಮೆಲ್ ಮಾಡುತ್ತಾರೆ,ಯಾರು ಏನೆನು ಮಾಡುತಿದ್ದಾರೆ ಎಂಬದು ಸಮಾಜದಲ್ಲಿಯ ಜನರಿಗೆ ಗೊತ್ತಿದ್ದೆ. ಈ ಬಗ್ಗೆ ಜನರೆ ತಿರಮಾನ ಮಾಡುತ್ತಾರೆ.
ಪ್ರಾದಿಕಾರದಿಂದ ಯಾವುದೆ ರೀತಿಯ ಸಾರ್ವಜನಿಕ ರು ಅನ್ಯಾಯಕ್ಕೆ ಓಳಗಾಗಿದ ನೊಂದವರು ನಮ್ಮಗೆ ಸಂಪರ್ಕ ಮಾಡಿ ಸಂಬಂದಪಟ್ಟ ದಾಖಲೆಗಳನ್ನ ತಂದು ಕೊಟ್ಟರೆ ತಮ್ಮೆಲರ ಪರವಾಗಿ ಒಂದು ಅಭಿಯಾನ ಪ್ರಾರಂಭಿಸಿ ನ್ಯಾಯದೊರಕಿಸಿ ಕೊಡಲು ಹೊರಾಟ ಮಾಡಲಾಗುವದು.
ನೊಂದವರು 9448120345 ಮೋಬೇಲ್ ಗೆ ಕರೆ ಮಾಡಿ ತಿಳಿಸಲು ಸಿದ್ರಾಮಯ್ಯ ಸ್ವಾಮಿ ಕೊರಿದ್ದಾರೆ.
ಇದೆ ವೇಳೆ ಕಾನೂನು ಸಲಹೆಗಾರ ನ್ಯಾಯವಾದಿ ಸಂಜಯ ಮಠಪತಿ ಇದ್ದರು.