ನಿವೇಶನ, ಮನೆ ನೀಡವಂತೆ  ಅಲೆಮಾರಿ ಸಮುದಾಯದಿಂದ  ಮನವಿ  


ಸಂಜೆವಾಣಿ ವಾರ್ತೆ   
ಹಗರಿಬೊಮ್ಮನಹಳ್ಳಿ. ಆ.18  ಪಟ್ಟಣದಲ್ಲಿ ವಾಸಿಸುವ  ಸಿಂದೋಳ್ ಪಂಗಡದ ಅಲೆಮಾರಿ ಸಮುದಾಯದವರಿಗೆ ಮನೆ ಮತ್ತು ನಿವೇಶನ ನೀಡುವಂತೆ  ಕ್ಷೇತ್ರದ ಶಾಸಕರಾದ ಕೆ.ನೇಮಿ ರಾಜ್ ನಾಯ್ಕ್ ಗೆ   ಮನವಿ ಸಲ್ಲಿಸಿದರು. 
ಅಲೆಮಾರಿ  ಸಮುದಾಯದ ಮುಖಂಡ ನರಸಿಂಹಪ್ಪ ಮಾತನಾಡಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನಮ್ಮ ಸಿಂದೊಳ್ ಜನಾಂಗದ ಅಲೆಮಾರಿ ಸಮುದಾಯದವರು ವಾಸಿಸುತ್ತಿದ್ದು ದುರ್ಮಾರ್ಗಿ ಒತ್ತು ಭಿಕ್ಷಾಟನೆ ಮಾಡುವ, ಮಿಕ್ಸರ್ ರಿಪೇರಿ ಮಾಡುವುದು ಜಿಪ್ ಹಾಕುವುದು ,ಹೀಗೆ  ಸಣ್ಣಪುಟ್ಟ ಕೈ ಕೆಲಸದಿಂದ ಜೀವನ ಸಾಗಿಸುತ್ತಿದ್ದು ನಮ್ಮ ಜನಾಂಗದವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದು ಹಲವಾರು ವರ್ಷದಿಂದ ವಾಸಿಸುತ್ತಿದ್ದರು ಇದುವರೆಗೂ ಬಹಳಷ್ಟು ಜನ ನಮ್ಮ ಸಮುದಾಯದವರಿಗೆ ನಿವೇಶನ ಇಲ್ಲ ಮನೆ ಇಲ್ಲ ಬೇರೆಯವರ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದು ಶಾಸಕರು ದಯಮಾಡಿ ನಮ್ಮ ಜನಾಂಗದ ಜನರಿಗೆ ನಿವೇಶನ ಮತ್ತು ಮನೆ ನೀಡುವಂತೆ ಮನವಿ ಮಾಡಿದರು.   
ಇದಕ್ಕೆ ಸ್ಪಂದಿಸಿದ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಮಾತನಾಡಿ ನಿವೇಶನ ಮತ್ತು ಮನೆ ನೀಡುವ ಬಗ್ಗೆ ಮನವಿ ಸಲ್ಲಿಸುವುದೇ ಬೇಡ ಯಾರ್ಯಾರಿಗೆ ನಿವೇಶನ ಇಲ್ಲ ಯಾರ್ಯಾರಿಗೆ ಮನೆ ಇಲ್ಲ ಎಂಬುದನ್ನು ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ಮನೆ ನೀಡುವ ಭರವಸೆ ನೀಡಿದರು. 
ಈ ಸಂದರ್ಭದಲ್ಲಿ  ಸಿಂದೋಳ್ ಜನಾಂಗದ  ಅಲೆಮಾರಿ ಸಮುದಾಯದ ವೀರಣ್ಣ ಶಂಕ್ರಪ್ಪ ಸುಂಕಪ್ಪ ಮಾರಕ್ಕ, ವೆಂಕಟಮ್ಮ, ದುರ್ಗಪ್ಪ ,ರೆಡ್ಡಪ್ಪ ,ಇನ್ನಿತರ ಸಮುದಾಯದ ಹಿರಿಯರು ಯುವಕರು ಮಹಿಳೆಯರು ಇದ್ದರು.