ನಿವೇಶನ ಮತ್ತು ವಸತಿ ಸೌಲಭ್ಯ ನೀಡಲು ಒತ್ತಾಯಿಸಿ ಮನವಿ.

ಹಗರಿಬೊಮ್ಮನಹಳ್ಳಿ:ನ.05 ತಾಲೂಕು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ವಾಸವಿರುವ ನೂರಾರು ಬಡ ಜನರಿಗೆ ವಾಸ ಮಾಡಲು ಸ್ವಂತಕ್ಕೆ ವಸತಿ ಇಲ್ಲ ಮತ್ತು ಇನ್ನು ಸಾಕಷ್ಟು ಜನರಿಗೆ ವಸತಿ ನಿರ್ಮಿಸಿಕೊಳ್ಳಲು ಸ್ವಂತ ನಿವೇಶನ ನೀಡುವಂತೆ ಒತ್ತಾಯಿಸಿ ತಹಶಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಸರೋಜ ಉಸ್ಮಾನ್ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನ ರಹಿತ ಬಡವರಿಗೆ ಒಂದೇ ಒಂದು ನಿವೇಶನ ನೀಡಿಲ್ಲ. ಈ ಬಗ್ಗೆ ನಮ್ಮ ಸಂಘಟನೆಯು ಸ್ಥಳೀಯ ಜನಪ್ರತಿನಿಧಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದೆ ಮತ್ತು ನಿವೇಶನ ಮತ್ತು ವಸತಿ ರಹಿತರಿಂದ ಸದರಿ ಸೌಲಭ್ಯ ನೀಡುವಂತೆ ಅರ್ಜಿಗಳನ್ನೂ ಸಹ ಸಲ್ಲಿಸಿದೆ. ಇಲ್ಲಿಯವರೆಗೂ ಅಧಿಕಾರದಲ್ಲಿದ್ದ ಮತ್ತು ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳಾಗಲಿ, ಸಂಬಂಧಿಸಿದ ಇಲಾಖೆ ಅಥವಾ ಜಿಲ್ಲಾ ಆಡಳಿತವಾಗಲಿ ಸರ್ಕಾರದಿಂದ ನಿವೇಶನಗಳನ್ನು ನೀಡುವ ಯಾವ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ರತ್ನಮ್ಮ,ಕಾರ್ಯದರ್ಶಿಜಿ .ಸರೋಜ, ಹುಲಿಗೆಮ್ಮ,ರೇಣುಕಮ್ಮ,ಚಾಂದಭೀ ಇತರಿದ್ದರು.