ನಿವೇಶನರಹಿತರಿಗೆ ವಸತಿ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೩; ಮೂಲಭೂತ ಸೌಕರ್ಯಗಳೊಂದಿಗೆ ವಸತಿ,ನಿವೇಶನರಹಿತರಿಗೆ ವಸತಿ ಹಾಗೂ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿ ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಿವೇಶನ ರಹಿತರು ಸಂಸದರ ಕಚೇರಿ‌ ಮುಂಭಾಗದಲ್ಲಿಪ್ರತಿಭಟನೆ ‌ನಡೆಸಿದರು.ಈ ವೇಳೆ ಸಿ.ಪಿ.ಐ.(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಹೆಚ್ ಆನಂದರಾಜ್ ಮಾತನಾಡಿ
ಪ್ರಧಾನಿಗಳು 2022 ಕ್ಕೆ ಪ್ರ ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮಿಂದ ಮತ ಪಡೆದಿದ್ದರು, ಆದರೆ ಇದುವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಸೂಕ್ತ ಕ್ರಮವಹಿಸಿ ವಸತಿಗಳ ನಿರ್ಮಾಣ ಮಾಡಿ ಹಂಚುವ ಕಾರ್ಯಕ್ರಮ ಮಾಡದೇ ಮತ್ತೊಂದು ಚುನಾವಣೆಗೆ ಮತ ಕೇಳಲು ಸಜ್ಜಾಗಿದ್ದಾರೆ, ಹಲವಾರು ವರ್ಷಗಳಿಂದ ಜಿಲ್ಲಾಡಳಿತ ಮತ್ತು ಪಾಲಿಕೆಯಲ್ಲಿ ನಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದರೂ ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ ಅಥವಾ ಸಂಸದರಾಗಲಿ ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲ.  ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಜಂಟಿ ಸಭೆಗೆ ದಿನಾಂಕ ನಿಗಧಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು, ಆದರೆ ಇಲ್ಲಿಯವರೆಗೆ ಯಾವುದೇ ಸಭೆಯನ್ನು ಕರೆದಿಲ್ಲ,  ನಮ್ಮ ಬೇಡಿಕೆಗಳಿಗೆ ಸಂಬAಧಿಸಿದAತೆ ತಕ್ಷಣ ಅಧಿಕಾರಿಗಳೊಂದಿಗೆ ಜಂಟಿ ಸಭೆ ಮಾಡುವ ಮೂಲಕ ನಮ್ಮ ಬೇಡಿಕೆಗಳನ್ನ ಈಡೇರಿಸಲು ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಶ್ರೀನಿವಾಸಮೂರ್ತಿ, ನೇತ್ರಾವತಿ,ರಕ್ಷಿತಾ,ರೇಣುಕಮ್ಮ,ಕರಿಯಪ್ಪ ಮತ್ತಿತರರಿದ್ದರು.