ನಿವೃತ್ತ ಸೈನಿಕನಿಗೆ ಅದ್ದೂರಿ ಸ್ವಾಗತ

ಸಿಂದಗಿ:ಫೆ.7: ಬಾರತೀಯ ಗಡಿಭದ್ರತಾ ಪಡೆಯಲ್ಲಿ 21ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರಿಗೆ ಮರಳಿದ ಅಂತರಗಂಗಿ ಗ್ರಾಮದ ನಿವಾಸಿ ಚಂದ್ರಕಾಂತ ಅತನೂರ ಅವರನ್ನು ನಗರದ ಬಸವೇಶ್ವರ ವೃತ್ತದ ಬಳಿ ಮಾಜಿ ಸೈನಿಕರು, ಗ್ರಾಮಸ್ಥರು ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಿದರು.

ಪಟ್ಟಣದ ಬಸವೇಶ್ವರ ವೃತ್ತ, ಸ್ವಾಮಿವಿವೇಕಾನಂದ ವೃತ್ತದಿಂದ ಮನ್ನಾಪುರ ಮಾರ್ಗವಾಗಿ ಗ್ರಾಮಕ್ಕೆ ಬೈಕ್ ರ್ಯಾಲಿ ಮುಖಾಂತರ ಅವರನ್ನು ತೆರೆದ ವಾಹನದಲ್ಲಿ ಕರೆತರಲಾಯಿತು.

ಈ ವೇಳೆ ರಸ್ತೆಯ ಮದ್ಯದಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಮುತ್ತು ಮುಂಡೇವಾಡಗಿ ಹಾಗೂ ಸದಸ್ಯರು, ಅಭಿಮಾನಿಗಳು, ನಿವೃತ್ತ ಸೈನಿಕರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಗೋಳಸಾರದ ಪುಂಡಲಿಂಗ ಮಹಾರಾಜರು, ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಶ್ರೀಶೈಲ ಯಳಮೇಲಿ, ಗೌರವಾಧ್ಯಕ್ಷ ಸಬ್ಬಿರ್‍ಪಟೇಲ್ ಬಿರಾದಾರ, ರವೀಂದ್ರ ಬಿರಾದಾರ, ಹಣಮಂತ್ರಾಯ ಬಿರಾದಾರ, ಕಲ್ಲಪ್ಪ ಹೂಗಾರ ಸೇರಿದಂತೆ ಗ್ರಾಮಸ್ಥರು ಹಾಗೂ ತಾಲೂಕಿನ ದೇಶಾಭಿಮಾನಿಗಳು ಇದ್ದರು.