ಗೋಕಾಕ,ಏ3 : ತಾಲೂಕಿನ ಶಿವಾಪೂರ (ಕೊ) ಗ್ರಾಮದ ಶ್ರೀ ರಾಮಕೃಷ್ಣ ವೆಂಕಪ್ಪ ನಾಯ್ಕ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ಸಂದರ್ಭದಲ್ಲಿ ಸೈನಿಕನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ನೀಡಿ ಸತ್ಕಾರ ಸಮಾರಂಭ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಮಲ್ಲಯ್ಯಾ ಅಜ್ಜಾ ಶಿವಾನಂದಮಠ ಘೋಡಗೇರಿ, ಬಸಗೌಡ .ಬಾ. ಪಾಟೀಲ, ಮನೋಹರ ಗೋಗಿಕೊಳ್ಳಮಠ, ಬಸವಣ್ಣೆಪ್ಪಾ ಪ. ಕಬಾಡಗಿ, ವೆಂಕಪ್ಪಾ ನಾಯ್ಕ, ಬಸವರಾಜು. ಹುನಶ್ಯಾಳ
ಎಂ.ವಾಯ್. ಬಡಿಗೇರ, ಬಾಳನಾಯ್ಕ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.