ನಿವೃತ್ತ ಸೇನಾನಿ ಶಿವಪ್ಪ ಅದ್ದೂರಿ ಸ್ವಾಗತ. ದೇಶವೆ ನಮ್ಮ ಮನೆ- ಶಿವಪ್ಪ

ಸಿರವಾರ.ಏ.೦೫- ದೇಶ ಕಾಯುವ ಸೈನಿಕರಿಗೆ ದೇಶವೆಲ್ಲಾ ಮನೆ ಇದ್ದಂತೆ, ಎಲ್ಲಾ ಜಾತಿ, ಧರ್ಮದವರು ಸಹೋದರಂತೆ ಕಾಣಬೇಕು, ಕಳೇದ ೨೫ ವರ್ಷಗಳ ದೇಶ ಸೇವೆ ಮಾಡಿದ ತೃಪ್ತಿ ಇದೆ, ಇದೇ ಪಟ್ಟಣದಲ್ಲಿಪ್ರೌಢ ಹಂತ ಶಿಕ್ಷಣ ಮುಗಿಸಿರುವೆ. ಕುಟುಂಬಸ್ಥರು, ಸ್ನೇಹಿತರ ಇಲಿನವರೆ, ಸೈನಿಕರ ಮೇಲೆ ಇಟ್ಟಿರುವ ಗೌರವಕ್ಕೆ ನಾನು ಚಿರ ಋಣಿಯಾಗಿರುವೆ ಎಂದು ಬಿ.ಎಸ್.ಎಫ್ ನಿವೃತ್ತ ಸೈನಿಕ ಶಿವಪ್ಪ ಹಣಗಿ ಹೇಳಿದರು. ತಾಲೂಕಿನ ಹಣಗಿ ಗ್ರಾಮದ ನಿವಾಸಿ ಶಿವಪ್ಪ ಅವರು ೨೦೦೦ ನೇ ವರ್ಷದಲ್ಲಿ ರಾಯಚೂರಿನ ಪೊಲೀಸ್ ಮೈದಾನದಲ್ಲಿ ಜರುಗಿದ ಬಿಎಸ್ ಎಪ್ ರ್ಯಾಲಿಯಲ್ಲಿ ಸೇನೆಗೆ ಸೇರಿದರು. ಜಮ್ಮು ಕಾಶ್ಮೀರದ ಬಟಾಲಿನಿಯಲ್ಲಿ ಮೊದಲ ಸೇವೆ, ನಂತರ ತ್ರಿಪೂರ, ಗುಜರಾತ, ರಾಜಸ್ಥಾನ, ಪಂಜಾಬ್, ನಾಗಾಲ್ಯಾಂಡ್,ಮಣಿಪುರ, ತ್ರಿಪುರದ ಅಂತರಾಷ್ಟ್ರೀಯ ಸೀಮಾ ಗಡಿಯಲ್ಲಿ ಸೇವೆ, ಸುಮಾರ ೧೦ ವರ್ಷಗಳ ಕಾಲ ಮದ್ಯಪ್ರದೇಶದ ಇಂದೋರನಲ್ಲಿ ಷೂಟಿಂಗ ತರಬೇತಿ ನೀಡಿದ್ದಾರೆ.
ಪಟ್ಟಣದ ಬಯಲು ಆಂಜನೇಯ್ಯ ವೃತ್ತಕ್ಕೆ ಆಗಮಿಸಿದ ಶಿವಪ್ಪ ಅವರನ್ನು ಪಟಾಕಿ ಸಿಡಿಸಿ, ಪುಷ್ಪಾರ್ಪಣೆ ಮಾಡುವ ಮೂಲಕ ಸ್ವಾಗತಿಸಲಾಯಿತು. ಕನದಾಸ ನಾಮಪಲಕಕ್ಕೆ ಮಾಲಾರ್ಪಣೆ ಮಾಡಿದರು. ನಂತರ ವಾಣೀಜ್ಯೋದ್ಯಮಿ, ಚುಕ್ಕಿ ಸೂಗಪ್ಪ ಸಾಹುಕಾರ, ಜೆ.ಶರಣಪ್ಪಗೌಡ, ಯುವ ಮುಖಂಡ ಎನ್.ಉದಯಕುಮಾರ, ಬಸವರಾಜ ಭಂಡಾರಿ, ಮಹಿಬೂಬು ಮದ್ಲಾಪೂರು ನರಸಿಂಹ ರಾವ ಕುಲಕರ್ಣಿ, ಪ್ರಕಾಶ ಪಾಟೀಲ್ ಮಾತನಾಡಿದರು. ನಂತರ ಬ್ರೀಜೆಶ ಪಾಟೀಲ್, ರಮೇಶ ದರ್ಶನಕರ್, ಜೆ.ದೇವರಾಜಗೌಡ, ಶಿವಶರಣ ಸಾಹುಕಾರ ಅರಕೇರಿ,ಮಲ್ಲಿಕಾರ್ಜುನ ಜಕ್ಕಲದಿನ್ನಿ, ಆರ್.ಕೆ.ಬಸವರಾಜ, ಶಿವರಾಮರೇಡ್ಡಿ, ಹೆಚ್.ಕೆ.ಅಮರೇಶ, ಅಣ್ಣಾರಾವ ನಾಯಕ, ಅಯ್ಯನಗೌಡ ಐರೇಡ್ಡಿ, ನಾಗರಾಜಗೌಡ, ಗುರುಗೌಡ,ಬಸವರಾಜ ಗಡ್ಲ, ಶಿವಗ್ಯಾನಿ, ಚನ್ನೂರು ಚನ್ನಪ್ಪ ನಾಯಕ, ಈಶಪ್ಪ ಹೂಗಾರ, ಎನ್.ಚಂದ್ರಶೇಖರ, ಉಮಾಶಂಕರ ಜೇಗರಕಲ್, ಸೂಗಪ್ಪ ಹೂಗಾರ, ಜಿ.ವಿರೇಶ, ಶರಣಪ್ಪ, ಶ್ರೀಕಾಂತ ಚನ್ನಬಸವ ಗಡ್ಡಲ, ವಿವಿಧ ಪಕ್ಷದ ಮುಖಂಡರು, ಪ.ಪಂಚಾಯತಿ ಸದಸ್ಯರು, ಹಾಲುಮತ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು, ಲಯನ್ಸ್ ಕ್ಲಬ್, ಯುವ ಬಳಗ ಇನ್ನೂ ಅನೇಕರಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.