ನಿವೃತ್ತ ಸಿಬ್ಬಂದಿಗಳು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿ, ಸಮಾಜ ಸೇವೆ ಮಾಡಬೇಕು: ಉಪ್ಪಿನ್

ಬೀದರ:ಜೂ.26:ವಿಶ್ವವಿದ್ಯಾಲಯದ (ಸರ್ಕಾರಿ) ಸೇವೆಯಲ್ಲಿದ್ದು, ನಿವೃತ್ತಿ ಹೊಂದಿರುವ ಸಿಬ್ಬಂದಿಗಳು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿ ಕೊಂಡು ಅವಶ್ಯಕತೆ ಇರುವ ಜನರಿಗೆ ಸಹಾಯಕಾರಿ ಯಾಗಬೇಕೆಂದು ಪಶು ವೈದ್ಯಕೀಯ ವಿಶ್ವವಿದ್ಯಾಲ ಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಕರೆ ನೀಡಿದರು.
ನಗರದಲ್ಲಿ, ( ಸರ್ಕಾರಿ) ವಿಶ್ವವಿದ್ಯಾಲಯದ ಸೇವೆಯಿಂದ ವಯೋ ನಿವೃತ್ತರಾದ ಸಿಬ್ಬಂದಿ- ಹಿರಿಯ ಫಾರ್ಮಸಿಸ್ಟ್ ಪ್ರಭು ಸಿಂಗ್ ಪವಾರ್ ಹಾಗೂ ಇತರರಿಗೆ ಒಕ್ಕೂಟದಿಂದ ಬೀದರ್ ನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಬೀಳ್ಕೊಡುಗೆಯ ಸ್ನೇಹ ಮಿಲನದಲ್ಲಿ ಮಾತನಾಡು ತ್ತಿದ್ದರು. ವಿಶ್ವವಿದ್ಯಾಲಯದ ಕೆಲಸದಲ್ಲಿರುವಾಗ ಸರ್ಕಾರದಿಂದ ಸಂಬಳ ಪಡೆದುಕೊಂಡು ತಮ್ಮ ಕುಟುಂಬದ ಪಾಲನೆ- ಪೆÇೀಷಣೆ ಮಾಡಿರುವ ಅವಧಿ ಅದು ಸೇವೆ ಅಲ್ಲ. ವಯೋನಿವೃತ್ತರಾದ ಮೇಲೆ ತಮ್ಮ ಸಂಪರ್ಕದಲ್ಲಿ ಬರುವ ವ್ಯಕ್ತಿಗಳಿಗೆ ಅಥವಾ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ಹಸ್ತ ಚಾಚಿದರೆ, ಅದು ಸೇವೆ ಯಾಗುತ್ತದೆ. ಆದ್ದರಿಂದ ಬಡ ಜನತೆಗೆ ತಮ್ಮ ಕೈಲಾದ ಅಳಿಲು ಸೇವೆಯನ್ನು ಸಲ್ಲಿ ಸುವ ಮೂಲಕ ಸಮಾಜದ ಋಣ ತೀರಿಸಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲ ಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ.ಎಮ್. ಕೆ. ತಾಂದಳೆಯವರು, ಸುದೀರ್ಘ ಅವಧಿಯ ಪ್ರಾಮಾಣಿಕ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿ ರುವ ಸಹಪಾಠಿಗಳು ತಮ್ಮ ಆದರ್ಶವನ್ನು ಬಿಟ್ಟು ಹೋಗುತ್ತಿದ್ದಾರೆ. ದೇವರು ಅವರಿಗೆ ಆಯುರಾರೋಗ್ಯ ನೀಡಿ ಕಾಪಾಡಲೆಂದು ವಿಶ್ವ ವಿದ್ಯಾಲಯವು ಹಾರೈಸು ತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸುಂದರ ಹಾಗೂ ಉಪ್ಪಿನ ರವರನ್ನು ಕೂಡ ಸನ್ಮಾನಿಸ ಲಾಯಿತು. ಸಸಿಗೆ ನೀರು ಎರೆಯುವ ಮೂಲಕ ಸ್ನೇಹ ಮಿಲನವನ್ನು ಉದ್ಘಾಟಿಸ ಲಾಯಿತು. ಸಂಘದ ಅಧ್ಯಕ್ಷ ದೇವೇಂದ್ರ, ಸದಸ್ಯ ರಾದ ನಾಗೇಂದ್ರ, ಅಮೃತ್ ಸೇರಿಕಾರ್, ಸೋಮೇಶ್ವರ, ನಾಗಭೂಷಣ ಹುಗ್ಗೆ, ಡಾ. ಆರ್. ಜಿ. ಬಿಜುರಕರ್, ಡಾಕ್ಟರ್ ಪ್ರಶಾಂತ್ ವಾಘ ಮಾರೆ ಮುಂತಾದವರು ಹಾಜರಿದ್ದರು.