ನಿವೃತ್ತ ಸಬ್ ರಿಜಿಸ್ಟರ್ ಶಿವಾನಂದ್ ಮನೆ ಮೇಲೆ ಎಸಿಬಿ ದಾಳಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 24  :  ಕಳೆದ ಜುಲೈನಲ್ಲಿ ನಿವೃತ್ತಿ ಹೊಂದಿರುವ  ಸಬ್ ರಿಜಿಸ್ಟರ್ ಕೆ.ಎಸ್. ಶಿವಾನಂದ್ ಅವರು ಅಕ್ರಮ ಸಂಪಾದನೆ ಮಾಡಿದ್ದಾರೆಂದು ಎಸಿಬಿ ಇಂದು ದಾಳಿ ಮಾಡಿದೆ.
ಶಿವಾನಂದ ಅವರು ಸದ್ಯ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ  ಕೊತ್ತನಳ್ಳಿಯಲ್ಲಿ ವಾಸವಾಗಿದ್ದಾರೆ. ಕೊತ್ತನಳ್ಳಿ ಮನೆ ಮೇಲೆ ಬಳ್ಳಾರಿಯ  ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. .
ಬಳ್ಳಾರಿ ತಾಲೂಕಿನ  ಮೋಕಾ ಗ್ರಾಮದಲ್ಲಿ 6 ಎಕರೆ ಜಮೀನು ಸೇರಿ ವಿವಿಧೆಡೆ ಆಸ್ತಿ ಹೊಂದಿದ್ದಾರೆ  ಎಂಬ ಆರೋಪ ಇದೆ.