ನಿವೃತ್ತ ಶಿಕ್ಷಕ ಶ್ರೀನಿವಾಸ್‌ಗೆ ಬೀಳ್ಕೊಡುಗೆ

ಕೋಲಾರ,ಸೆ.೫- ನಗರದ ಚಿನ್ಮಯ ವಿದ್ಯಾಲಯದಲ್ಲಿ ೩೦ ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತಗೊಂಡ ಕೆ.ಎಂ.ಶ್ರೀನಿವಾಸ್‌ರನ್ನು ಶಾಲಾ ಆವರಣದಲ್ಲಿ ಅಭಿನಂದಿಸಿ ಬೀಳ್ಕೊಡಲಾಯಿತು.
ಸಂಸ್ಥೆಯ ಅಧ್ಯಕ್ಷ ಪಿ.ಚಂದ್ರಪ್ರಕಾಶ್ ಮಾತನಾಡಿ, ಕೆ.ಎಂ.ಶ್ರೀನಿವಾಸ್ ರವರ ಸಂಯಮ, ಶಿಸ್ತುಬದ್ಧ ಸೇವೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸಿ, ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿ ಹೆಚ್ಚಿನ ತರಬೇತಿಗಳನ್ನು ನೀಡಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ತಂಡಗಳು ವಿಜೇತರಾಗುವಂತೆ ಮಾಡಿದ್ದರಲ್ಲದೆ ಪ್ರತಿವರ್ಷವೂ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಮತ್ತು ಹೆಚ್ಚಿನ ತಂಡಗಳು ಭಾಗವಹಿಸುವಂತೆ ಮಾಡುತ್ತಿದ್ದರು. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರಿಯಾಗುತ್ತಿದ್ದರು ಎಂದು ಅವರ ಸೇವೆಯನ್ನು ಪ್ರಶಂಸಿ ಮುಂದಿನ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನರಸಿಂಹ ಪ್ರಸಾದ್, ಮುಖ್ಯೋಪಾ ಧ್ಯಾಯ ದ್ವಾರಕನಾಥ್, ಶಿಕ್ಷಕರಾದ ಬಸವರಾಜ್, ಚಂದ್ರಶೇಖರ್, ರತ್ನಮ್ಮ, ಕನಕಮ್ಮ, ಶೈಲಜ, ಲೋಕೇಶ್ ಸೇರಿದಂತೆ ಶಿಕ್ಷಕವೃಂದ, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.