ನಿವೃತ್ತ ಶಿಕ್ಷಕ ನಾರಾಯಣರೆಡ್ಡಿಗೆ ಬೀಳ್ಕೊಡುಗೆ

ಕಲಬುರಗಿ,ನ.1- ನಗರದ ನೂತನ ವಿದ್ಯಾಲಯ ಸಂಸ್ಥೆಯ ನೂತನ ವಿದ್ಯಾಲಯ ಕನ್ಯಾ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿ ಕಳೆದ 39 ವರ್ಷಗಳಷ್ಟು ಸುದಿರ್ಘ ಕಾಲ ಸೇವೆ ಸಲ್ಲಿಸಿ, ಅ.31ರಂದು ಸೇವಾ ನಿವೃತ್ತರಾದ ನಾರಾಯಣರೆಡ್ಡಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಶಾಲೆಯ ಸಹೋದ್ಯೋಗಿಗಳು ಮತ್ತು ಸಿಬ್ಬಂದಿಗಳು ಶನಿವಾರ ಆಯೋಜಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ನಾರಾಯಣರೆಡ್ಡಿ ಮತ್ತು ಅವರ ಧರ್ಮಪತ್ನಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು, ಈ ಸಂದರ್ಭದಲ್ಲಿ ನಾರಾಯಣರೆಡ್ಡಿ ಅವರ ಸಾರ್ಥಕ ಸೇವೆ, ಶಿಸ್ತು, ಪ್ರಾಮಾಣಿಕತೆ, ವಿನಯಶೀಲತೆ ಹಾಗೂ ಆತ್ಮೀಯತೆಯನ್ನು ಸಹೋದ್ಯೋಗಿಗಳು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ನಿವೃತ್ತ ಜೀವನ ಸುಖಕರವಾಗಲೆಂದು ಅವರೆಲ್ಲರೂ ಶುಭ ಹಾರೈಸಿದರು.