ನಿವೃತ್ತ ಶಿಕ್ಷಕ ಎಂ.ಪಿ ರಾಜುಗೆ ಅಭಿನಂದನಾ ಕಾರ್ಯಕ್ರಮ

ಮಾಲೂರು,ಜೂ.೫- ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಪಿ ರಾಜು ಅವರನ್ನು ವಹಿನಿ ಕುಲ ಕ್ಷತ್ರಿಯ ಕ್ಷತ್ರಿಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದಿಸಲಾಯಿತು
ಸಂಘದ ಅಧ್ಯಕ್ಷ ಕೆ ಎಂ ರಾಜಪ್ಪ ಮಾತನಾಡಿ ಸುಮಾರು ೪೧ ವರ್ಷಗಳ ಕಾಲ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ದಾನಿಗಳ ಸಹಕಾರ ಪಡೆದು ಶಾಲಾ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಅಲ್ಲದೆ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿದ್ದು ಅಪಾರ ಜನ ಮನ್ನಣೆ ಗಳಿಸಿದ್ದಾರೆ ಇವರ ಸೇವೆಯನ್ನು ಗುರುತಿಸಿ ಜಿಲ್ಲಾ ಶಿಕ್ಷಣ ಇಲಾಖೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ನೀಡಿ ಅವರ ಕರ್ತವ್ಯ ನಿಷ್ಠೆ ಪ್ರಶಂಸಿಸಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಂ.ಎಸ್. ಶ್ರೀನಿವಾಸ್ ಕಾರ್ಯದರ್ಶಿ ಎನ್ ಅರ್ಜುನ ಖಜಾಂಚಿ ಎನ್ .ವಿ .ಶ್ರೀನಿವಾಸ್ ಸಂಘಟನಾ ಕಾರ್ಯದರ್ಶಿ ಕೆ ರವಿಕುಮಾರ್, ಸಿ. ಕೃಷ್ಣ ಮುನಿರಾಜು ,ಹೆಚ್ .ವಿ ಮಂಜುನಾಥ್ ಎಸ್ ವೈ ನಾಗರಾಜಪ್ಪ ಶ್ರೀನಿವಾಸ್ ಎಂಎಂ ರಾಧಮ್ಮ ಎಂಎನ್ ಮಂಜುಳ ಹಾಗೂ ಕುಟುಂಬಸ್ಥರು ಹಾಜರಿದ್ದರು