
ಹುಬ್ಬಳ್ಳಿ, ಆ 3: ನಗರದ ಶ್ರೀ ಜಗದ್ಗುರು ಗಂಗಾಧರ ಹೈಸ್ಕೂಲ್‍ನ ಕನ್ನಡ ಭಾಷಾ ಶಿಕ್ಷಕರಾದ ಕೊಟ್ರೇಶ್ ಗುರುಪಾದಪ್ಪಾ ಆರಾಧ್ಯಮಠ ಇವರು ನಿವೃತ್ತಿ ಹೊಂದಿದ್ದು, ಅವರಿಗೆ ಸನ್ಮಾನ ಸಮಾರಂಭವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ವೀರಯ್ಯಸ್ವಾಮಿ ಸಾಲಿಮಠ ಮಾತನಾಡಿ, ಆರಾಧ್ಯಮಠ ಶಿಕ್ಷಕರ ಪಾಠ ನಮಗೆ ಕೇವಲ ಶಾಲಾ ಪಾಠವಾಗಿರದೇ ಜೀವನ ಪಾಠವಾಗಿತ್ತು. ಅವರು ಕಲಿಸಿದ ಶಿಸ್ತು, ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನವು ನಮಗೆ ಸದಾ ದಾರಿದೀಪವಾಗಿದೆ ಎಂದು ಹೇಳಿದರು.
ದೇವಸ್ಥಾನದಲ್ಲಿ ಪೂಜೆ ಸಂದರ್ಭದಲ್ಲಿ ದೇವರಿಗೆ ಕೊಡೆ ಹಿಡಿದು ಪೂಜೆ ಮಾಡಲಾಗುತ್ತದೆ. ಅದೇ ರೀತಿ ನಾನು ನಿವೃತ್ತ ಶಿಕ್ಷಕರಿಗೆ ಕೊಡೆ ಹಿಡಿಯುತ್ತೇನೆ ಎಂದು ಸಾಲಿಮಠ ಅವರು ನಿವೃತ್ತ ಶಿಕ್ಷಕರಾದ ಆರಾಧ್ಯಮಠ ಅವರಿಗೆ ಕೊಡೆ ಹಿಡಿದು ಸನ್ಮಾನಿಸಿದ್ದು ವಿಶೇಷವಾಗಿತ್ತು.
ಪ್ರಕಾಶ್ ಕುಲಕರ್ಣಿ, ಚನ್ನಬಸಯ್ಯ ಹಿರೆಮಠ, ಪ್ರಕಾಶ್ ಗದಿಗೆಪ್ಪನವರ, ದೈಹಿಕ ಶಿಕ್ಷಕರಾದ ಶಿವಕುಮಾರ ಬಸವರಾಜ ಹೀರೆಮಠ, ಶಾಲಾ, ಕಾಲೇಜನ ಶಿಕ್ಷಕರು ಸಮಾರಂಭದಲ್ಲಿದ್ದರು.