ನಿವೃತ್ತ ಯೋಧ ಕಾಮಣ್ಣ ಮದಗುಣಕಿಗೆ ಗೌರವ ಸತ್ಕಾರ

ಕಲಬುರಗಿ:ಮಾ.10: ಸಿಐಎಸ್‍ಎಫ್ ದಿನಾಚರಣೆ ಪ್ರಯುಕ್ತ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪದ ‘ಸಂಜೀವಿನ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವÀರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ನಿವೃತ್ತ ಯೋಧ ಕಾಮಣ್ಣ ಮದಗುಣಕಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ.ಕಮಠಾಣ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಶಿವಪುತ್ರ ಮಾಲಿ ಪಾಟೀಲ, ಸುಭದ್ರಾ ಬಿರಾದಾರ, ಶರಣಮ್ಮ ತಳವಾರ, ರುಕ್ಮೀಣಿ ಪಾಟೀಲ, ಚಂದ್ರಕಲಾ, ಮಹಾದೇವಿ ಮರಗುತ್ತಿ, ರತ್ನಾಬಾಯಿ ಸೇರಿದಂತೆ ಮತ್ತಿತರರಿದ್ದರು.