ನಿವೃತ್ತ ಯೋಧರಿಗೆ ರಾಯಣ್ಣ ಗೌರವ ಪುರಸ್ಕಾರ

ದಾವಣಗೆರೆ.ಜ.೮; ಸ್ವಾಮಿನಿಷ್ಠೆ, ದೇಶಭಕ್ತಿಗೆ ಮತ್ತೊಂದು ಹೆಸರು ಸಂಗೊಳ್ಳಿ ರಾಯಣ್ಣ, ಆ ಮಹಾನ್ ವ್ಯಕ್ತಿ ಹುಟ್ಟಿದ್ದ ಆಗಸ್ಟ್ 15, ಅಂದು ಭಾರತ ದೇಶದ ಸ್ವಾತಂತ್ರೋತ್ಸವ, ರಾಯಣ್ಣನನ್ನು ಬ್ರಿಟಿಷರುಗಲ್ಲಿಗೇರಿಸಿದ್ದು ಜನವರಿ 26, ಅಂದು ಭಾರತ ದೇಶ ಗಣರಾಜ್ಯವಾಗಿದ್ದು. ಇಂತಹ ವೀರನನ್ನುಪಡೆದ ಭಾರತೀಯರು ಧನ್ಯರು. ಜನವರಿ 26ರಂದು “ಸಂಗೊಳ್ಳಿ ರಾಯಣ್ಣರ ಬಲಿದಾನ ದಿವಸ”ವನ್ನಾಗಿ  ಆಚರಿಸಲಾಗುತ್ತಿದೆ. ದಾವಣಗೆರೆ ನಗರದ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ಮುಂಭಾಗದಲ್ಲಿ  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಯೋಧರಿಗೆ “ರಾಯಣ್ಣ ಗೌರವ ಪುರಸ್ಕಾರ” ನೀಡಿ ಗೌರವಿಸಲಾಗುವುದು. ದಾವಣಗೆರೆ ಜಿಲ್ಲೆಯರುವ ನಿವೃತ್ತ ಸೈನಿಕರು (ಯೋಧರು) ಹುತಾತ್ಮ ಯೋಧರ ಮನೆಯವರುತಮ್ಮ ವಿವರಗಳನ್ನು  ನಂ. 76/2ಎ, ಮೊದಲನೇ ಮಹಡಿ, ಪಿ. ಜೆ. ಬಡಾವಣೆ, ಶ್ರೀರಾಮ ಪಾರ್ಕ್ ಹತ್ತಿರ, ದಾವಣಗೆರೆ-577 001. ಇಲ್ಲಿಗೆ ತಲುಪಿಸುವಂತೆ  ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ ಮನವಿ ಮಾಡಿದ್ದಾರೆ.