ನಿವೃತ್ತ ಯೋಧನಿಗೆ ಸನ್ಮಾನ

ಲಕ್ಷ್ಮೇಶ್ವರ,ಮೇ2: ಸೈನಿಕನಾಗಿ ದೇಶದ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದ ವೀರ ಯೋಧ ಕರಬಸಪ್ಪ ಅಯ್ಯನವರ ಅವರನ್ನು ನಿನ್ನೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಗೌರವಿಸಿದರು.
ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ನಿವೃತ್ತ ಯೋಧರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುತ್ತಾ, ಮೆರೆ ದೇಶಕಿ ಧರ್ತಿ ಸೊನೆ ವುಗಲೆ ಎಂಬ ಹಾಡನ್ನು ಹಾಕಿ ಸಂಭ್ರಮಿಸಿ ರಾಷ್ಟ್ರಪ್ರೇಮವನ್ನು ಮೆರೆದರು.
ಮೆರವಣಿಗೆಯಲ್ಲಿ ನಿವೃತ್ತ ಯೋಧರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿವೃತ್ತ ಸೈನಿಕರು, ಅಭಿಮಾನಿಗಳು ಪಾಲ್ಗೊಂಡಿದ್ದರು.