ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಮುನವಳ್ಳಿ,ಸೆ6: ಪಟ್ಟಣದಲ್ಲಿ ಭಾರತೀಯ ಸೇನೆಯಲ್ಲಿ 19 ವರ್ಷಗಳ ಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಟ್ಟಣಕ್ಕೆ ಆಗಮಿಸಿದ ಯೋಧ ಹುಸೇನಸಾಬ ಬುಡ್ಡೇಸಾಬ ಜಮಾದಾರ ಇವರನ್ನು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ಶ್ರೀ ಕುಮಾರೇಶ್ವರ ಆಲೂರಮಠದಿಂದ ತೆರೆದ ವಾಹನದ ಮೆರವಣಿಗೆಗೆ ಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು. ಯೋಧನ ಮನೆಯವರೆಗೆ ವಾದ್ಯ ಮೇಳಗಳೊಂದಿಗೆ ಸಂಬ್ರಮದ ಸ್ವಾಗತ ಕೋರಲಾಯಿತು. ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು ಹಾಗೂ ಯುವಕರು ಹೂ ಮಳೆಗೈದು ಭಾರತ ಮಾತ ಕೀ ಜೈ ಘೋಷಣೆಗಳನ್ನು ಕೂಗಿದರು ಗಾಂದಿನಗರದ ಭವ್ಯ ಮಂಟಪದಲ್ಲಿ ಸನ್ಮಾನ ಸಮಾರಂಭ ಜರುಗಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ|| ಬಸೀರಹ್ಮದ ಭೈರಕದಾರ ಇವತ್ತು ನಾವು ದೇಶದ ಗಡಿ ಕಾಯುವ ಸೈನಿಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಅದು ಕಡಮೆಯೆ ದೇಶಕ್ಕಾಗಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಯೋಧರಿಗೆ ನಾವು ಸದಾ ಗೌರವಿಸೋಣ ಎಂದರು.
ಯೋಧನನ್ನು ಸನ್ಮಾನಿಸಿ ಮಾತನಾಡಿದ ಪಂಚನಗೌಡ ದ್ಯಾಮನಗೌಡರ ಪ್ರಾಣದ ಹಂಗನ್ನು ತೊರೆದು ನಮ್ಮನ್ನು ಹಗಲಿರುಳು ರಕ್ಷಣೆ ಮಾಡುವ ನಮ್ಮ ಭಾರತೀಯ ಸೈನಿಕರು ನಿಜವಾದ ಗೌರವಕ್ಕೆ ಪಾತ್ರರಾಗಿದ್ದಾರೆ ಪ್ರತಿಯೊಂದು ಮನೆಯಲ್ಲಿ ಒಬ್ಬರು ಸೈನಿಕರು ಇರಬೇಕು ಹಾಗೂ ಭಾರತಾಂಬೆಯ ಸೇವೆ ಮಾಡಬೇಕು ಎಂದರು.
ಹಾಫೀಜ ಅಬ್ದುಲ್ ಭೈರಕದಾರ, ವಿಶ್ವಾಸ ವೈಧ್ಯ, ಸೌರಭ ಚೋಪ್ರಾ, ದಾವಲಸಾಬ ಚಪ್ಟಿ, ಪುರಸಭೆ ಸದಸ್ಯ ಮೀರಾಸಾಬ ವಟ್ನಾಳ, ರಫೀಕ ಬೇಪಾರಿ, ಯಶವಂತ ಯಲಿಗಾರ, ನಿಖಿಲ್ ಬಾಳಿ, ಮಕ್ತುಮ ಯರಗಟ್ಟಿ, ಸಮೀರ ಚೂರಿಖಾನ, ಬುಡ್ಡೇಸಾಬ ಜಮಾದಾರ, ಅಲ್ಲಿಸಾಬ ಕೊಳಚಿ, ಬುಡ್ಡಾ ಚಿಕ್ಕುಂಬಿ, ಅಯೂಬ ಹುಕ್ಕೇರಿ, ಸಮ್ಮದ ಹುಕ್ಕೇರಿ, ಸಮೀರ ಬೆಳವಡಿ, ರಫೀಕ ಬೇಪಾರಿ, ಬಸಪ್ಪ ತಲ್ಲೂರ, ಎ.ಎಂ ಚಪ್ಪಿ, ಶ್ಯಾನೂರ ಜಮಾದಾರ, ಮಾಜಿ ಸೈನಿಕರ ಸಮನ್ವಯ ಸಮೀತಿ ಸದಸ್ಯರು ಸೇನೆ ಗೌರವ ಸಲ್ಲಿಸಿದರು.
ಸ್ವಾಗತವನ್ನು ಬಾಳು ಹೊಸಮನಿ, ಭವಾನಿ ಕೊಂದುನಾಯ್ಕ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳಿಂದ ಯೋಧನಿಗೆ ಸನ್ಮಾನ ಜರುಗಿತು.