ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ’’

ದಾವಣಗೆರೆ.ಜ.೧೦; ದೇಶದಾದ್ಯಂತ ನಾವುಗಳು ಬ್ಯಾಂಕಿನಿಂದ  ನಿವೃತ್ತಿಯಾಗಿ ಸುಮಾರು 26ವರ್ಷಗಳಾಗಿರುತ್ತದೆ. ಅದರೂ ಪಿಂಚಣಿ ಹೆಚ್ಚಗೆ  ಆಗಿರುವುದಿಲ್ಲ. ಅದರೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2018 ರಿಂದ ಆರ್.ಬಿ.ಐ.ನಲ್ಲಿ  ನಿವೃತ್ತಿ ನೌಕರರಿಗೂ ಮತ್ತು ಅಧಿಕಾರಿ ವರ್ಗದವರಿಗೂ ಪಿಂಚಣಿ ಹೆಚ್ಚಿಗೆ ಮಾಡಲಾಗಿರುತ್ತದೆ.  ಆದೇ ರೀತಿ ನಬಾರ್ಡ್ ಮತ್ತು ಆರ್.ಆರ್.ಬಿ.ನಲ್ಲಿಯೂ ಹೆಚ್ಚಿಗೆ ಕೊಟ್ಟಿರುತ್ತಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವವರೆಗೂ, ಷೆಡ್ಯೂಲ್ ಬ್ಯಾಂಕ್‌ನಲ್ಲಿರುವ ನಿವೃತ್ತ ನೌಕರರಿಗೂ ಮತ್ತು ಅಧಿಕಾರಿ ವರ್ಗದವರಿಗೆ ಇದುವರೆಗೂ  ಪಿಂಚಣಿ ಹೆಚ್ಚಿಗೆ ಆಗಿರುವುದಿಲ್ಲ. ಈ ತಾರತಮ್ಯವನ್ನು ನೋಡಿ, ನಿವೃತ್ತ ಬ್ಯಾಂಕ್ ನೌಕರರು ಹಿರಿಯ ನಾಗರೀಕರು ಆನೇಕರು ಮೃತಪಟ್ಟಿರುತ್ತಾರೆ. ಮತ್ತು ಕುಟುಂಬದವರು ಬಡತನದಿಂದ ಅನಾಥರಾಗಿರುತ್ತಾರೆ. ಇದರೊಂದಿಗೆ ಪ್ಯಾಮಿಲಿ ಪೇನ್ಶನ್ ನೀಡಲು ಸರ್ಕಾರ 15 -30 % ನೀಡಲು ಸರ್ಕಾರ ತಿಳಿಸಿದ್ದರೂ ಆದರೆ ಇದುವರೆಗೂ ಜಾರಿಯಾಗಿರುವುದಿಲ್ಲ ದಯಮಾಡಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಬೇಕೆಂದು ಕೋರುತ್ತೇನೆ.ಈ ವಿಷಯದಲ್ಲಿ  ಪ್ರಧಾನಪತ್ರಿಗಳಾದ  ನರೇಂದ್ರಮೋದಿಜೀ ಯವರು  ಬಡವರ ಕುಟುಂಬಕ್ಕೆ ಬೆಂಬಕ್ಕೆ ಬೆನ್ನುಲುಬಾಗಿ ನಿಂತು ಪಿಂಚಣಿ ಮತ್ತು ಸಂಬಳ ಹೆಚ್ಚು ನೀಡಲು ಈ ಸಾಲಿನ ಹಣಕಾಸಿನ ಬಜೆಟ್‌ನಲ್ಲಿ ಕಾಯ್ದಿರಿಸಬೇಕೆಂದು ಶ್ರೀಮತಿ  ನಿರ್ಮಲ ಸೀತರಾಮನ್ ಇವರಿಗೆ ಆದೇಶಿಸಬೇಕೆಂದು ಹಾಗೂ ಐ.ಬಿ.ಎ. ಛರ‍್ಮನ್‌ರವರ ಗಮನಕ್ಕೆ ತರಬೇಕೆಂದು ನಿವೃತ್ತ ಬ್ಯಾಂಕ್ ನೌಕರರಾದ ಹೆಚ್.ಹನುಮಂತಪ್ಪ ಮನವಿ ಮಾಡಿದ್ದಾರೆ.