ನಿವೃತ್ತ ಪ್ರಾಚಾರ್ಯ ಕ್ರಾಂತಿಕುಮಾರ ಸಿರ್ಸೆಗೆ ಪಟ್ಟದ್ದೇವರಿಂದ ಸನ್ಮಾನ

ಭಾಲ್ಕಿ :ಜು. 24 ಪಟ್ಟಣದ ಚನ್ನಬಸವಾಶ್ರಮದಲ್ಲಿ ಏರ್ಪಡಿಸಲಾದ 279 ನೇ ಮಾಸಿಕ ಶರಣ ಸಂಗಮ ಮತ್ತು ಶರಣ ಕುಂಬಾರ ಗುಂಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಕ್ರಾಂತಿಕುಮಾರ ಸಿರ್ಸೆ ದಂಪತಿಗಳಿಗೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರಾಂತಿಕುಮಾರ ಸಿರ್ಸೆ ಇವರು ಫಾರ್ಮಸಿ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆಗೈದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸದ್ಭುತ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಹಾಗೂ ನಮ್ಮ ಶ್ರೀಮಠದ ಮೇಲೆ ಅವರಿಗೆ ಅಪಾರ ಭಕ್ಕಿ-ಅಭಿಮಾನ ಇದೆ ಎಂದು ಅವರ ಸೇವೆಯನ್ನು ಸ್ಮರಿಸಿದರು.
ಬಸವಾದಿ ಶರಣರ ಸಮಕಾಲಿನ ಕುಂಬಾರ ಗುಂಡಯ್ಯ ಕಾಯಕ ನಿಷ್ಠರಾಗಿದ್ದರು. ಅವರು ಕಾರ್ಯಕ್ಷೇತ್ರ ಭಾಲ್ಕಿ ಆಗಿದೆ. ಅವರಿಂದ ಈ ಪಟ್ಟಣ ಐತಿಹಾಸಿಕ ಮಹತ್ವ ಪಡೆದಿದೆ. ಕೈಲಾಸ ಬೇಡ ಕಾಯಕವೇ ಇರಲಿ ಎಂಬುದು ಅವರ ದಿವ್ಯ ಸಂದೇಶವಾಗಿದೆ. ಇವರ ಪತ್ನಿ ಕೇತಲದೇವಿ ಅನಾಚಾರಿಗಳ ಸಂಗ ನರಕಕ್ಕೆ ಮೂಲ ಎಂದು ತಮ್ಮ ವಚನದಲ್ಲಿ ಬೋಧಿಸಿದ್ದಾರೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಕರ್ನಾಟಕ ಜಾನಪದ ಪರಿಷತ್ತು ಭಾಲ್ಕಿ ಘಟಕದ ಅಧ್ಯಕ್ಷ ವಸಂತ ಹುಣಸನಾಳೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿರ್ವತ್ತರಾದÀ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಕ್ರಾಂತಿಕುಮಾರ ಸಿರ್ಸೆ, ಬಸವರಾಜ ಬಿರಾದಾರ, ವೈ.ಆರ್.ಇಂಗಳೆ ಅವರಿಗೆ ಸನ್ಮಾನಿಸಲಾಯಿತು. ನಾಟಿವೈದ್ಯ ರವಿದಾಸ ಮೆಂಗಾ ಮುಖ್ಯ ಅತಿಥಿಗಳಾಗಿದ್ದರು.
ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಅವರ ಹುಟ್ಟುಹಬ್ಬ ನಿಮಿತ್ಯ ಪೂಜ್ಯರಿಂದ ಆಶೀರ್ವಾದ ಪಡೆದರು. ಡೋಣಗಾಪೂರದ ಪೂಜ್ಯ ದೇವಮ್ಮತಾಯಿ, ಶಾಂತಮ್ಮ ವಾಡೆ, ಸಹದೇವ ಉಪಸ್ಥಿತರಿದ್ದರು.
ನಿರ್ಮಲಾ ಪ್ರಭುರಾವ ದೇವಣೆ ಭಕ್ತಿದಾಸೋಹ ವಹಿಸಿಕೊಂಡಿದ್ದರು. ಕುಂಬಾರ ಸಮಾಜದ ಅಧ್ಯಕ್ಷ ಜಯಪ್ರಕಾಶ ಕುಂಬಾರ ಅವರು ಬಸವಗುರುಪೂಜೆ ನೆರವೇರಿಸಿದರು. ರಾಜು ಜುಬರೆ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಯಲ್ಲನಗೌಡ ಬಾಗಲಕೋಟ, ಚನ್ನಬಸವ ವಡಗಾಂವ ಅವರಿಂದ ವಚನಗಾಯನ ನಡೆಯಿತು. ವೀರಣ್ಣ ಕುಂಬಾರ ಸ್ವಾಗತಿಸಿ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.