ನಿವೃತ್ತ ಪ್ರಮುಖ ಅಗ್ನಿಶಾಮಕ ಯೋಗೀಶ್ ಪಿ.ಬಂಗೇರಾಗೆ ವಿದಾಯ ಕೂಟ

ಮೂಡುಬಿದಿರೆ, ಎ.೫- ಕಳೆದ ಹಲವು ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸಿ, ಮೂಡುಬಿದಿರೆ ಅಗ್ನಿಶಾಮಕ ದಳದಲ್ಲಿ ಆರು ವರ್ಷಗಳಿಂದ ಪ್ರಮುಖ ಅಗ್ನಿಶಾಮಕನಾಗಿ ಸೇವೆ ಸಲ್ಲಿಸಿ ಇದೀಗ ವಯೋ ಸಹಜ ನಿವೃತ್ತಿ ಹೊಂದಿರುವ ಯೋಗೀಶ್ ಪಿ.ಬಂಗೇರಾ ಅವರಿಗೆ ವಿದಾಯ ಕೂಟ ಸಮಾರಂಭವು ಮೂಡುಬಿದಿರೆಯ ಕಛೇರಿಯಲ್ಲಿ ನಡೆಯಿತು.
ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಚ್ ಎಂ.ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಸಹಿತ ಸಿಬಂದಿ ವರ್ಗದವರು ಸೇರಿ ಯೋಗೀಶ್ ಪಿ.ಬಂಗೇರಾ ದಂಪತಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಅಭಿನಂದಿಸಿ ಬೀಳ್ಕೊಡಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಯೋಗೀಶ್ ಪಿ.ಬಂಗೇರಾ ಅವರು ಮಾತನಾಡಿ ನಿಷ್ಠೂರ ಹಾಗೂ ಶಿಸ್ತಿನಿಂದ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ವಯೋ ಸಹಜ ನಿವೃತ್ತಿ ಹೊಂದಿದ್ದೇನೆ ಯಾವುದೇ ರೀತಿಯ ಬೇಸರವಿಲ್ಲ. ಕರ್ತವ್ಯದಲ್ಲಿದ್ದಾಗ ಎಲ್ಲರ ಜೊತೆ ಬೆರೆತಿದ್ದೇನೆ ಎಂದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಕುಮಾರ್, ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಸ್ಟೀಫನ್ ಡಿಸಿಲ್ವ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್, ಮಹಮ್ಮದ್ ಸಹಿತ ಗೃಹ ರಕ್ಷಕದಳದ ಸಿಬಂದಿಗಳು ಶುಭ ಹಾರೈಸಿದರು.
ಸಿಬಂಧಿ ಪುಂಡಲೀಕ್ ಎನ್ ಕಾರ್ಯಕ್ರಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶ್ರೀಯಾನ್ ವಂದಿಸಿದರು.